ಪುರುಷರು ತಮ್ಮ ಪತ್ನಿಯನ್ನು ಬೈಕ್ನಲ್ಲಿ ಹಿಂಬದಿ ಕೂರಿಸಿಕೊಂಡು ಹೋಗುವುದು ಬಲು ಸಾಮಾನ್ಯ. ಆದರೆ ರೋಲ್- ರಿವರ್ಸಲ್ನಲ್ಲಿ, ವಯಸ್ಸಾದ ಮಹಿಳೆಯೊಬ್ಬರು ತನ್ನ ಪತಿಯನ್ನು ಮೊಪೆಡ್ನಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
ಈ ಮಧುರ ಕ್ಷಣದ ವಿಡಿಯೋ ವೆೈರಲ್ ಆಗಿದ್ದು, ವಯಸ್ಸಾದ ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ಸವಾರಿ ಮಾಡುತ್ತಿರುವುದು ಕಾಣಿಸುತ್ತದೆ. ಈ ವಿಡಿಯೋವನ್ನು ಸುಸ್ಮಿತಾ ಡೋರಾ ಎಂಬುವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ, ಸೀರೆಯುಟ್ಟ ಮಹಿಳೆಯ ಹಿಂದೆ ಮೊಪೆಡ್ನಲ್ಲಿ ಬಿಳಿ ಬಟ್ಟೆಯಲ್ಲಿರುವ ವೃದ್ಧರು ಹಿಂಬದಿಯ ಸೀಟಿನಲ್ಲಿ ಕುಳಿತಿರುವುದನ್ನು ಕಾಣಬಹುದು.
ವೀಡಿಯೋ ಇರುವ ಸ್ಥಳ ದೃಢಪಟ್ಟಿಲ್ಲವಾದರೂ, ತಮಿಳುನಾಡಿನ ದ್ವಿಚಕ್ರ ವಾಹನದ ಸಂಖ್ಯೆ ಕಾಣಿಸುತ್ತದೆ. “ಕಪಲ್ ಗೋಲ್ಸ್,” ಎಂದು ವಿಡಿಯೋದ ಶೀರ್ಷಿಕೆ ಇದೆ. ನೆಟ್ಟಿಗರು ಇದನ್ನು ನೋಡಿ ಖುಷಿಪಟ್ಟು ಕಾಮೆಂಟ್ ಮಾಡಿದ್ದಾರೆ. ಏಕೆ ಮಹಿಳೆಯರು ಯಾವಾಗಲೂ ಹಿಂದೆ. ಇದು ನಿಜವಾಗಿಯೂ ಪ್ರೀತಿದಾಯಕವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ದಕ್ಷಿಣ ಭಾರತದಲ್ಲಿ ಇದು ಸಾಮಾನ್ಯ ಎಂದು ಕೆಲವರು ಹೇಳಿದ್ದಾರೆ.