alex Certify ʼಐಸ್ ಕ್ರೀಂʼ ಪೋಸ್ಟರ್ ನೆಕ್ಕಿದ ನಾಯಿ; ಅಯ್ಯೋ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಐಸ್ ಕ್ರೀಂʼ ಪೋಸ್ಟರ್ ನೆಕ್ಕಿದ ನಾಯಿ; ಅಯ್ಯೋ ಎಂದ ನೆಟ್ಟಿಗರು

ಸಾಮಾಜಿಕ ಜಾಲತಾಣ ಪ್ರಾಣಿಗಳಿಗೆ ಸಂಬಂಧಪಟ್ಟ ಕಂಟೆಂಟ್​ಗಳಿಂದ ತುಂಬಿಹೋಗಿದೆ. ಅದರಲ್ಲೂ ನಾಯಿ ವಿಡಿಯೋಗಳು ಹೆಚ್ಚು ಜನಪ್ರಿಯವಾಗಿವೆ.

ನಾಯಿಗಳ ಬಗೆಗಿನ ವಿಡಿಯೋ ಜನರಿಗೆ ಅಚ್ಚುಮೆಚ್ಚು. ಅವುಗಳ ಮುದ್ದಾದ ವರ್ತನೆಗಳನ್ನು ವೀಕ್ಷಿಸಲು ಜನರು ಬಹಳ ಇಷ್ಟಪಡುತ್ತಾರೆ. ಆದರೆ ಈ ಸೂಕ್ಷ್ಮ ವಿಡಿಯೊ ನೋಡುಗರಿಗೆ ಸ್ವಲ್ಪ ದುಃಖವನ್ನು ಉಂಟುಮಾಡಬಹುದು.

ವಿಡಿಯೋದಲ್ಲಿ ನಾಯಿಯೊಂದು ಐಸ್​ ಕ್ರೀಂನ ಪೋಸ್ಟರ್​ ಅನ್ನು ನೆಕ್ಕುವುದರಲ್ಲಿ ನಿರತವಾಗಿದೆ. ಪೋಸ್ಟರ್​ 3 ವಿಭಿನ್ನ ರೀತಿಯ ಐಸ್​ ಕ್ರೀಮ್​ಗಳನ್ನು ತೋರಿಸುತ್ತದೆ. ಹಸಿದ ನಾಯಿ ಹತಾಶವಾಗಿ ಪೋಸ್ಟರ್​ ನೆಕ್ಕುತ್ತದೆ ಮತ್ತು ಐಸ್​ ಕ್ರೀಮ್​ ಸ್ಯಾಂಡ್​ವಿಚ್​ ತಿನ್ನಲು ಪ್ರಯತ್ನಿಸುತ್ತದೆ. ಅದು ಸಾಧ್ಯವಾಗದಿದ್ದಾಗ ನಿರಾಶೆಯಿಂದ ಹಲವು ಬಾರಿ ಜಾಹೀರಾತು ಫಲಕಕ್ಕೆ ಮೊಟಕುತ್ತದೆ.

ವಿಡಿಯೊವು 5.2 ಮಿಲಿಯನ್​ ವೀಕ್ಷಣೆ ಕಂಡಿದ್ದು, 22,000 ಕ್ಕೂ ಹೆಚ್ಚು ರೀಟ್ವೀಟ್​ ಆಗಿದೆ. ಹಲವರು ನಾಯಿಯ ಬಗ್ಗೆ ಸಹಾನುಭೂತಿ ತೋರಿಸಿದರೆ, ಕೆಲವರು ಅಯ್ಯೋ ಎಂದು ಕನಿಕರ ವ್ಯಕ್ತಪಡಿಸಿದ್ದಾರೆ, ಕೆಲವರು ಖುಷಿಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...