ಗಿಳಿಗಳ ಮಾತೇ ಅಂದ. ಅವುಗಳ ಮಾತುಗಳನ್ನು ಕೇಳುವುದೆಂದರೆ ತುಂಬಾ ಹಿತಕರ. ಮನುಷ್ಯನಂತೆಯೇ ಮಾತನಾಡುವ ಸಾಮರ್ಥ್ಯ ಹೊಂದಿರುವ ಗಿಳಿಗಳನ್ನು ಸಾಕುವವರು ಹಲವರಿದ್ದಾರೆ. ಅವುಗಳಿಗೆ ಮನುಷ್ಯರಂತೆ ಮಾತುಗಳನ್ನೂ ಕಲಿಸುತ್ತಾರೆ.
ಇಂಥದ್ದೇ ಒಂದು ಮುದ್ದಾದ ಗಿಳಿಯ ಮಾತಿನ ವಿಡಿಯೋ ಇದೀಗ ವೈರಲ್ ಆಗಿದೆ. ಗಿಳಿಯೊಂದು ಮಾತನ್ನಷ್ಟೇ ಅಲ್ಲದೇ ಹಾಡು ಕೂಡ ಹೇಳುವ ಸಾಮರ್ಥ್ಯ ಹೊಂದಿದ್ದು, ಗಿಳಿ ಹಾಡು ಹೇಳುವ ವಿಡಿಯೋ ಇದಾಗಿದೆ.
ಈ ವಿಡಿಯೋದ ಆರಂಭದಲ್ಲಿ ಹಾಡೊಂದು ಕೇಳಿಬರುತ್ತದೆ. ಯಾರೋ ಚಿಕ್ಕಮಕ್ಕಳು ಬಾತ್ರೂಮಿನಲ್ಲಿ ಕುಳಿತು ಹಾಡು ಹಾಡುತ್ತಿರಬಹುದು ಎನ್ನಿಸುತ್ತದೆ. ಆದರೆ ಬಾತ್ರೂಮಿನ ಬಾಗಿಲು ತೆಗೆದಾಗಲೇ ಗೊತ್ತಾಗುವುದು ಅಲ್ಲಿರುವುದು ಮನುಷ್ಯರಲ್ಲ, ಬದಲಿಗೆ ಗಿಳಿ ಎಂದು. ಕಮೋಡ್ ಮೇಲೆ ಕುಳಿತ ಗಿಳಿ ಜೋರಾಗಿ ಮನುಷ್ಯರ ಭಾಷೆಯಲ್ಲಿಯೇ ಹಾಡು ಹೇಳುವುದನ್ನು ಕೇಳಿ ನಿಜಕ್ಕೂ ಅಚ್ಚರಿಯಾಗುತ್ತದೆ.
ಮುದ್ದಾದ ಮತ್ತು ತಮಾಷೆಯ ಪ್ರಾಣಿಗಳ ವಿಡಿಯೋಗಳನ್ನು ನಿಯಮಿತವಾಗಿ ಹಂಚಿಕೊಳ್ಳುವ ‘buitengebieden’ ಪುಟದಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ಗಿಳಿಯ ಕ್ಯೂಟ್ ಹಾಡಿಗೆ ಮನಸೋಲದವರೇ ಇಲ್ಲ ಎನ್ನಬಹುದೇನೋ.
https://twitter.com/buitengebieden/status/1590031351243505670?ref_src=twsrc%5Etfw%7Ctwcamp%5Etweetembed%7Ctwterm