ಮಹಿಳೆಯೊಬ್ಬರು ಸೀರೆಯಲ್ಲಿ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಂಟರ್ನೆಟ್ ಬಳಕೆದಾರರನ್ನು ಆಕರ್ಷಿಸುತ್ತಿದೆ.
ಫಿಟ್ನೆಸ್ ಫ್ರೀಕ್ ಆಗಿರುವ ರೀನಾ ಸಿಂಗ್ ಎಂಬ ಬಳಕೆದಾರರಿಂದ ಈ ಕಿರು ವಿಡಿಯೋ ವೈರಲ್ ಆಗಿದೆ. ಇವರು ತಮ್ಮ ಖಾತೆಯಲ್ಲಿ ವ್ಯಾಯಾಮಕ್ಕೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡುತ್ತಾರೆ. ಈಗ ಪೋಸ್ಟ್ ಮಾಡಿರುವ ವಿಡಿಯೋ 10 ಲಕ್ಷಕ್ಕೂ ಅಧಿಕ ಲೈಕ್ಸ್, 33 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ವೀಡಿಯೊದಲ್ಲಿ, ರೀನಾ ಸಿಂಗ್ ಅವರ ಅತ್ಯಂತ ಕಠಿಣ ವ್ಯಾಯಾಮಗಳನ್ನು ನೋಡಬಹುದು. ಸ್ಕ್ವಾಟ್ಗಳನ್ನು ನಿರ್ವಹಿಸುವಾಗ ಅವರು ಜಿಗಿಯುವುದು ಮತ್ತು ಬೃಹತ್ ಟೈರ್ ಎತ್ತುವುದನ್ನು ಸಹ ಕಾಣಬಹುದು. ಎಲ್ಲರೂ ಜಿಮ್ಗೆ ನಿಗದಿತ ಬಟ್ಟೆ ಧರಿಸುವಾಗ ಯಾವುದಕ್ಕೂ ಕಮ್ಮಿ ಇಲ್ಲ ಎಂದು ಸೀರೆಯಲ್ಲಿ ಮಾಡುವ ಈ ಕಸರತ್ತು ನೆಟ್ಟಿಗರ ಹೃದಯ ಗೆದ್ದಿದೆ.