alex Certify ಹೈದರಾಬಾದ್​ ರಸ್ತೆಯಲ್ಲಿ ತೇಲಿದ ಬಿರಿಯಾನಿ ಪಾತ್ರೆಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈದರಾಬಾದ್​ ರಸ್ತೆಯಲ್ಲಿ ತೇಲಿದ ಬಿರಿಯಾನಿ ಪಾತ್ರೆಗಳು….!

ಹೈದರಾಬಾದ್​ನಲ್ಲಿ ಎರಡು ದಿನಗಳ ಹಿಂದೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದ್ದು, ನಗರದ ಹಲವು ಪ್ರದೇಶಗಳು ಜಲಾವೃತವಾಗಿತ್ತು.

ಇದೀಗ ಹೈದರಾಬಾದ್​ನ ಜಲಾವೃತ ಪ್ರದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ವಿಡಿಯೋ ತುಣುಕು ತಮಾಷೆಯಾಗಿಯೂ ಕಾಣಿಸಿದೆ. ಕೆಲವರ ಬೇಸರಕ್ಕೂ ಕಾರಣವಾಗಿದೆ. ಬಿರಿಯಾನಿ ಪ್ರಿಯರಿಗೆ ಈ ವಿಡಿಯೋ ಚುರುಕ್​ ಎನಿಸಿರಬಹುದು.

ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್​ನಲ್ಲಿ ಅದಿಬಾ ಹೋಟೆಲ್​ ಹೆಸರಿನ ಉಪಾಹಾರ ಗೃಹವನ್ನು ತೋರಿಸುತ್ತದೆ. ನಿರಂತರ ಮಳೆ ಮತ್ತು ಪ್ರವಾಹದ ಪ್ರದೇಶದ ನಡುವೆ ಎರಡು ದೊಡ್ಡ ಬಿರಿಯಾನಿ ಪಾತ್ರೆಗಳು ರಸ್ತೆಗೆ ಬಂದು ತೇಲುತ್ತಿರುವುದನ್ನು ಕಾಣಬಹುದು. ಆ ಪಾತ್ರೆಗಳು ಬಹುಶಃ ವೀಡಿಯೊದಲ್ಲಿ ತೋರಿಸಿರುವ ರೆಸ್ಟೋರೆಂಟ್​ಗೆ ಸೇರಿದ್ದವೆಂದು ನಂಬಲಾಗಿದೆ.

ಬಿರಿಯಾನಿ ಪಾತ್ರೆಗಳ ತೇಲುವಿಕೆಯ ಬಗ್ಗೆ ನೆಟ್ಟಿಗರು ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. “ಯಾರೂ ತನ್ನ ಬಿರಿಯಾನಿ ಆರ್ಡರ್​ ಪಡೆಯದಿದ್ದಕ್ಕಾಗಿ ಪಾತ್ರೆಗಳು ಅಸಂತೋಷಗೊಂಡಿವೆ” ಎಂದು ಒಬ್ಬರು ಕಾಮೆಂಟ್​ ಮಾಡಿದ್ದರೆ, “ಇದು ಯಾರ ಮನೆಗೆ ತಲುಪುತ್ತದೋ ಆ ಮನೆಯವರು ಸಂತೋಷಪಡುತ್ತಾರೆ” ಎಂದು ಇನ್ನೊಬ್ಬರು ಹಾಸ್ಯ ಮಾಡಿದ್ದಾರೆ. “ಬಹುಶಃ ಇದು ಆರ್ಡರನ್ನು ವಿತರಿಸುವ ಹೊಸ ಮಾರ್ಗವಾಗಿದೆ ಎಂದೂ ಹೇಳಿದವರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...