ಹೈದರಾಬಾದ್ನಲ್ಲಿ ಎರಡು ದಿನಗಳ ಹಿಂದೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದ್ದು, ನಗರದ ಹಲವು ಪ್ರದೇಶಗಳು ಜಲಾವೃತವಾಗಿತ್ತು.
ಇದೀಗ ಹೈದರಾಬಾದ್ನ ಜಲಾವೃತ ಪ್ರದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋ ತುಣುಕು ತಮಾಷೆಯಾಗಿಯೂ ಕಾಣಿಸಿದೆ. ಕೆಲವರ ಬೇಸರಕ್ಕೂ ಕಾರಣವಾಗಿದೆ. ಬಿರಿಯಾನಿ ಪ್ರಿಯರಿಗೆ ಈ ವಿಡಿಯೋ ಚುರುಕ್ ಎನಿಸಿರಬಹುದು.
ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್ನಲ್ಲಿ ಅದಿಬಾ ಹೋಟೆಲ್ ಹೆಸರಿನ ಉಪಾಹಾರ ಗೃಹವನ್ನು ತೋರಿಸುತ್ತದೆ. ನಿರಂತರ ಮಳೆ ಮತ್ತು ಪ್ರವಾಹದ ಪ್ರದೇಶದ ನಡುವೆ ಎರಡು ದೊಡ್ಡ ಬಿರಿಯಾನಿ ಪಾತ್ರೆಗಳು ರಸ್ತೆಗೆ ಬಂದು ತೇಲುತ್ತಿರುವುದನ್ನು ಕಾಣಬಹುದು. ಆ ಪಾತ್ರೆಗಳು ಬಹುಶಃ ವೀಡಿಯೊದಲ್ಲಿ ತೋರಿಸಿರುವ ರೆಸ್ಟೋರೆಂಟ್ಗೆ ಸೇರಿದ್ದವೆಂದು ನಂಬಲಾಗಿದೆ.
ಬಿರಿಯಾನಿ ಪಾತ್ರೆಗಳ ತೇಲುವಿಕೆಯ ಬಗ್ಗೆ ನೆಟ್ಟಿಗರು ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. “ಯಾರೂ ತನ್ನ ಬಿರಿಯಾನಿ ಆರ್ಡರ್ ಪಡೆಯದಿದ್ದಕ್ಕಾಗಿ ಪಾತ್ರೆಗಳು ಅಸಂತೋಷಗೊಂಡಿವೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, “ಇದು ಯಾರ ಮನೆಗೆ ತಲುಪುತ್ತದೋ ಆ ಮನೆಯವರು ಸಂತೋಷಪಡುತ್ತಾರೆ” ಎಂದು ಇನ್ನೊಬ್ಬರು ಹಾಸ್ಯ ಮಾಡಿದ್ದಾರೆ. “ಬಹುಶಃ ಇದು ಆರ್ಡರನ್ನು ವಿತರಿಸುವ ಹೊಸ ಮಾರ್ಗವಾಗಿದೆ ಎಂದೂ ಹೇಳಿದವರಿದ್ದಾರೆ.