ಹೈಟೆನ್ಷನ್ ಎಲೆಕ್ಟ್ರಿಕ್ ವೈರ್‌ಗಳಿಗೆ ಸ್ಕೂಟರ್ ಒಂದು ನೇತುಹಾಕಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಸ್ಕೂಟರ್ ಅಷ್ಟು ಎತ್ತರಕ್ಕೆ ಹೋಗಿದ್ದಾದರೂ ಹೇಗೆ ಎಂದು ನೆಟ್ಟಿಗರು ತಲೆ ಕೆರೆದುಕೊಂಡಿದ್ದಾರೆ.
ಈ ವಿಡಿಯೋವನ್ನು ಜಮ್ಮುವಿನಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಜೂನ್ 18ರಂದು ಬೀಸಿದ ಜೋರು ಗಾಳಿಯಿಂದ ಹಾಗೆ ಆಗಿದೆ ಎನ್ನುವ ಥಿಯರಿಯೊಂದು ಹರಿದಾಡುತ್ತಿದೆ.
“ಬೇಟಾ ಸ್ಕೂಟಿಯನ್ನು ಯಾವುದಾದರೂ ಸೇಫ್ ಜಾಗದಲ್ಲಿ ಪಾರ್ಕ್ ಮಾಡು. ದೀದಿ: ಹಾಂಜೀ ಪಾಪಾ,” ಎಂದು ಅಪ್ಪ – ಮಗಳ ನಡುವಿನ ಸಂಭಾಷಣೆಯೊಂದನ್ನು ಸಿಮ್ಯೂಲೇಟ್ ಮಾಡಿ ಈ ವಿಡಿಯೋಗೆ ಕ್ಯಾಪ್ಷನ್ ಹಾಕಲಾಗಿದೆ.
“ಬಹುಶಃ ಅದು ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಡೈರೆಕ್ಟ್ ಚಾರ್ಜಿಂಗ್ ಆಗುತ್ತಿದೆ,” ಎಂದು ನೆಟ್ಟಿಗರೊಬ್ಬರು ಜೋಕ್ ಮಾಡಿದ್ದಾರೆ.
https://twitter.com/swatic12/status/1671095111181037568?ref_src=twsrc%5Etfw%7Ctwcamp%5Etweetembed%7Ctwterm%5E1671095111181037568%7Ctwgr%5E7c36210649c0ab4f30a3a5220d37647c0947fc88%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fscooter-entangled-in-electricity-wires-leaves-internet-utterly-confused-2395994-2023-06-21
https://twitter.com/TheAmitChowdhry/status/1671098114374246400?ref_src=twsrc%5Etfw%7Ctwcamp%5Etweetembed%7Ctwterm%5E1671098114374246400%7Ctwgr%5E7c36210649c0ab4f30a3a5220d37647c0947fc88%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fscooter-entangled-in-electricity-wires-leaves-internet-utterly-confused-2395994-2023-06-21