ಸೈಕಲ್ ಮೇಲೆ ಗರಿಷ್ಠ ಎಷ್ಟು ಮಂದಿ ಕೂರಬಹುದು? 3 ಅಥವಾ ನಾಲ್ಕು ಅಂತನೇ ನೀವೆಲ್ಲ ಉತ್ತರಿಸಬಹುದು. ಆದರೆ ಬರೋಬ್ಬರಿ 10 ಮಂದಿ ಸೈಕಲ್ ಮೇಲೆ ಕೂತು ಸವಾರಿ ಮಾಡಿದ್ದಾರೆ.
ಸೈಕಲ್ ಸವಾರ 9 ಮಕ್ಕಳನ್ನ ಕೂರಿಸ್ಕೊಂಡು ಸೈಕಲ್ ನಲ್ಲಿ ಕರೆದೊಯ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋನ ಜೈಕಿ ಯಾದವ್ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ವಿಶ್ವದ ಜನಸಂಖ್ಯೆಯು 8 ಬಿಲಿಯನ್ ತಲುಪಿದೆ. ಈ ಸಾಧನೆಯನ್ನು ಸಾಧಿಸಲು ಇಂತಹ ಮಾನವರು ಸಾಕಷ್ಟು ಕೊಡುಗೆ ನೀಡಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ.
ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಒಂಬತ್ತು ಮಕ್ಕಳನ್ನು ಬೈಸಿಕಲ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮೂರು ಮಕ್ಕಳು ಹಿಂದೆ ಕುಳಿತಿದ್ದರೆ, ಒಬ್ಬರು ಇತರರ ಮೇಲೆ ನಿಂತುಕೊಂಡು ವ್ಯಕ್ತಿಯ ಹೆಗಲನ್ನು ಹಿಡಿದಿದ್ದಾರೆ.
ಇಬ್ಬರು ಮಕ್ಕಳು ಸೈಕಲ್ ನ ಮುಂಭಾಗದ ಬಾರ್‌ನಲ್ಲಿ ಕುಳಿತಿರುವುದು ಕಂಡುಬರುತ್ತದೆ ಮತ್ತು ಏಳನೇ ಮಗು ಮುಂಭಾಗದ ಚಕ್ರದ ಮೇಲೆ ವ್ಯಕ್ತಿಗೆ ಎದುರಾಗಿ ಕುಳಿತಿರುವುದು ಕಂಡುಬರುತ್ತದೆ. ಉಳಿದ ಇಬ್ಬರು ಮಕ್ಕಳು ಸವಾರನ ತೋಳುಗಳ ಮೇಲಿದ್ದಾರೆ. ಮಕ್ಕಳೆಲ್ಲರೂ ಸವಾರಿಯ ಉದ್ದಕ್ಕೂ ಆರಾಮಾಗಿ ಇರುವಂತೆ ಕಾಣುತ್ತದೆ.
ವಿಡಿಯೋ ವೈರಲ್ ಆಗ್ತಿದ್ದಂತೆ ಇಂಟರ್ನೆಟ್ ಬಳಕೆದಾರರು ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ. ಒಂದೇ ಸೈಕಲ್‌ನಲ್ಲಿ ಕುಳಿತಿರುವ ಒಂಬತ್ತು ಮಕ್ಕಳು ಸವಾರನದ್ದೇ ಎಂದು ಕೆಲವರು ಆಶ್ಚರ್ಯಪಟ್ಟರೆ, ಇನ್ನು ಕೆಲವರು ಜನಸಂಖ್ಯೆ ಸ್ಫೋಟಕ್ಕೆ ಸೈಕಲ್ ಸವಾರರಂತಹವರ ತಪ್ಪು ಎಂದಿದ್ದಾರೆ. ಈ ವೀಡಿಯೋ ಚಿತ್ರೀಕರಣಗೊಂಡ ಸ್ಥಳ ತಿಳಿದುಬಂದಿಲ್ಲ.
https://twitter.com/JaikyYadav16/status/1592438950991626241