alex Certify ಸಾಕು ಪ್ರಾಣಿಗಾಗಿ ಮುದ್ದು ಮುದ್ದಾಗಿ ಹಾಡಿದ ಪುಟ್ಟ ಬಾಲಕಿ: ನೆಟ್ಟಿಗರು ಫುಲ್​ ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕು ಪ್ರಾಣಿಗಾಗಿ ಮುದ್ದು ಮುದ್ದಾಗಿ ಹಾಡಿದ ಪುಟ್ಟ ಬಾಲಕಿ: ನೆಟ್ಟಿಗರು ಫುಲ್​ ಫಿದಾ

ಮಕ್ಕಳು ಪ್ರಾಣಿಗಳ ಜೊತೆ ಆಟವಾಡುತ್ತಿರುವ ವಿಡಿಯೋಗಳು ಎಂದಿಗೂ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸೋದ್ರಲ್ಲಿ ಯಶಸ್ವಿಯಾಗುತ್ತವೆ.

ಇದೀಗ ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರಿದ್ದು ಇದರಲ್ಲಿ ಪುಟ್ಟ ಬಾಲಕಿ ತನ್ನ ಮುದ್ದಾದ ಸಾಕು ಪ್ರಾಣಿಯನ್ನ ಎತ್ತಿಕೊಂಡು ಹಾಡುತ್ತಿದ್ದಾಳೆ. ಪ್ರೇರಿ ಡಾಗ್​ ಎಂಬ ಹೆಸರಿನ ಪ್ರಾಣಿಯನ್ನ ಕೈನಲ್ಲಿ ಹಿಡಿದುಕೊಂಡ ಬಾಲಕಿ ಮುಗ್ಧ ಭಾಷೆಯಲ್ಲಿ ಹಾಡುತ್ತಿದ್ದು ಈ ವಿಡಿಯೋ ಅನೇಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಆದರೆ ಇನ್ನೂ ಕೆಲವರು ಈ ರೀತಿ ಪ್ರೇರಿ ಡಾಗ್​ನ್ನು ಹತ್ತಿರದಿಂದ ಸಂಪರ್ಕಿಸೋದು ಬಾಲಕಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀವ್ಸ್ ಹಾಗೂ 4 ಸಾವಿರ ಲೈಕ್ಸ್ ಸಂಪಾದಿಸಿದೆ. ಪ್ರೇರಿ ಡಾಗ್​ ಎನ್ನುವುದು ಉತ್ತರ ಅಮೆರಿಕ ಮೂಲದ ಪ್ರಾಣಿಯಾಗಿದೆ. ಇದು ಶ್ವಾನಗಳಂತೆಯೇ ಕೂಗೋದ್ರಿಂದ ಇವಕ್ಕೆ ಈ ಹೆಸರು ಬಂದಿದೆ.ಈ ಪ್ರಾಣಿಗಳು ಪ್ಲೇಗ್​ ಕಾಯಿಲೆಗೆ ಒಳಗಾಗೋದ್ರಿಂದ ಇವುಗಳು ಮನುಷ್ಯನ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಹೇಳಲಾಗುತ್ತೆ.

— Buitengebieden (@buitengebieden_) May 30, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...