ಮಕ್ಕಳು ಪ್ರಾಣಿಗಳ ಜೊತೆ ಆಟವಾಡುತ್ತಿರುವ ವಿಡಿಯೋಗಳು ಎಂದಿಗೂ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸೋದ್ರಲ್ಲಿ ಯಶಸ್ವಿಯಾಗುತ್ತವೆ.
ಇದೀಗ ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರಿದ್ದು ಇದರಲ್ಲಿ ಪುಟ್ಟ ಬಾಲಕಿ ತನ್ನ ಮುದ್ದಾದ ಸಾಕು ಪ್ರಾಣಿಯನ್ನ ಎತ್ತಿಕೊಂಡು ಹಾಡುತ್ತಿದ್ದಾಳೆ. ಪ್ರೇರಿ ಡಾಗ್ ಎಂಬ ಹೆಸರಿನ ಪ್ರಾಣಿಯನ್ನ ಕೈನಲ್ಲಿ ಹಿಡಿದುಕೊಂಡ ಬಾಲಕಿ ಮುಗ್ಧ ಭಾಷೆಯಲ್ಲಿ ಹಾಡುತ್ತಿದ್ದು ಈ ವಿಡಿಯೋ ಅನೇಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಆದರೆ ಇನ್ನೂ ಕೆಲವರು ಈ ರೀತಿ ಪ್ರೇರಿ ಡಾಗ್ನ್ನು ಹತ್ತಿರದಿಂದ ಸಂಪರ್ಕಿಸೋದು ಬಾಲಕಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀವ್ಸ್ ಹಾಗೂ 4 ಸಾವಿರ ಲೈಕ್ಸ್ ಸಂಪಾದಿಸಿದೆ. ಪ್ರೇರಿ ಡಾಗ್ ಎನ್ನುವುದು ಉತ್ತರ ಅಮೆರಿಕ ಮೂಲದ ಪ್ರಾಣಿಯಾಗಿದೆ. ಇದು ಶ್ವಾನಗಳಂತೆಯೇ ಕೂಗೋದ್ರಿಂದ ಇವಕ್ಕೆ ಈ ಹೆಸರು ಬಂದಿದೆ.ಈ ಪ್ರಾಣಿಗಳು ಪ್ಲೇಗ್ ಕಾಯಿಲೆಗೆ ಒಳಗಾಗೋದ್ರಿಂದ ಇವುಗಳು ಮನುಷ್ಯನ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಹೇಳಲಾಗುತ್ತೆ.
https://twitter.com/i/status/1399035279202213895