alex Certify ಕಾರಿನ ಟಾಪ್​ ಮೇಲೆ ನಾಯಿ ಕುಳ್ಳರಿಸಿ ಸಂಚಾರ: ನೆಟ್ಟಿಗರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಟಾಪ್​ ಮೇಲೆ ನಾಯಿ ಕುಳ್ಳರಿಸಿ ಸಂಚಾರ: ನೆಟ್ಟಿಗರ ಆಕ್ರೋಶ

ನೀವು ನಾಯಿ ಪೋಷಕರಾಗಿದ್ದರೆ, ಇವುಗಳು ಕಾರಿನಲ್ಲಿ ಪ್ರಯಾಣಿಸಲು ಸಂಪೂರ್ಣವಾಗಿ ಇಷ್ಟಪಡುವುದು ಎಂಬುದು ನಿಮಗೆ ತಿಳಿದಿರಬಹುದು. ನಾಲಿಗೆಯನ್ನು ಹೊರಚಾಚುತ್ತಾ ಅದು ತಂಗಾಳಿಯನ್ನು ಆನಂದಿಸುತ್ತದೆ. ಸಹಜವಾಗಿ, ಸಾಕುಪ್ರಾಣಿ ಮಾಲೀಕರು ತಮ್ಮ ಈ ಸ್ನೇಹಿತನಿಗೆ ಉತ್ತಮವಾದದ್ದನ್ನು ನೀಡಲು ಬಯಸುತ್ತಾರೆ. ಆದಾಗ್ಯೂ, ಮಿತಿಮೀರಿ ಹೋಗುವಂತಹ ವಿಷಯಗಳೂ ಕೆಲವೊಮ್ಮೆ ಕಂಡುಬರುತ್ತದೆ.

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಾಕುಪ್ರಾಣಿಗಳ ಸಂತೋಷಕ್ಕೆ ಸ್ವಲ್ಪ ವಿಪರೀತ ಎನ್ನುವಷ್ಟರ ಮಟ್ಟಿಗೆ ಹೋಗಿದ್ದಾರೆ. ಈ ವ್ಯಕ್ತಿಯು ನಾಯಿಯನ್ನು ಕಾರಿನ ಮೇಲ್ಛಾವಣಿಯ ಮೇಲೆ ಕೂರಿಸಿಕೊಂಡು ಚಾಲನೆ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದೆ. ವಿಡಿಯೋ ನೋಡಿದ ಹಲವಾರು ಮಂದಿ ರಸ್ತೆ ಸುರಕ್ಷತೆ ಮತ್ತು ಪ್ರಾಣಿ ಹಿಂಸೆಯನ್ನು ಪ್ರಶ್ನಿಸಿದ್ದಾರೆ.

Forever Bengaluru ಎಂಬ ಟ್ವಿಟರ್ ಹ್ಯಾಂಡಲ್ ಆನ್‌ಲೈನ್‌ನಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಚಲಿಸುವ ವಾಹನದ ಛಾವಣಿಯ ಮೇಲೆ ಕಂದು ಬಣ್ಣದ ಕಾಲರ್ ಧರಿಸಿರುವ ನಾಯಿಯನ್ನು ನೋಡಬಹುದು. ಕಾರಿನ ಹಿಂದಿನ ವಾಹನದಿಂದ ವ್ಯಕ್ತಿಯೊಬ್ಬರು ಈ ದೃಶ್ಯಾವಳಿಗಳನ್ನು ದಾಖಲಿಸಿದ್ದಾರೆ.

ನಾಯಿ ಕಾರಿನ ಮೇಲ್ಭಾಗದಲ್ಲಿ ನಿಂತಿರುವುದನ್ನು ತೋರಿಸುವ ಮೂಲಕ ವೀಡಿಯೊ ಆರಂಭವಾಗುತ್ತದೆ. ವಾಹನವು ಕಾರನ್ನು ಹಿಂದಿಕ್ಕುತ್ತಿದ್ದಂತೆ, ಒಬ್ಬ ವ್ಯಕ್ತಿ ಮಾತ್ರ ಕಾರಿನೊಳಗೆ ಕುಳಿತಿರುವುದನ್ನು ಕಾಣಬಹುದು. ಇದರ ಬಗ್ಗೆ ಹಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...