
ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಯಮುನಾ ನದಿಯ ನೀರಿನ ಮಟ್ಟ 206.02 ಮೀಟರ್ ದಾಖಲಾಗಿದೆ.
ದೆಹಲಿಯ ಹಲವು ಭಾಗಗಳಲ್ಲಿ ತೀವ್ರವಾದ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ರಸ್ತೆಗಳಲ್ಲಿ ಹೊಂಡದಲ್ಲಿ ತುಂಬಿರುವ ನೀರಿನಲ್ಲಿ ಮಕ್ಕಳು ಹಾಗೂ ಹಿರಿಯರು ಆಟವಾಡಿದ ವಿಡಿಯೋ ವೈರಲ್ ಆಗಿದೆ.
ಗಬ್ಬರ್ ಸಿಂಗ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಜನರು ಚರಂಡಿ ನೀರಿನಲ್ಲಿ ಆಟವಾಡಿದ್ದಾರೆ. ಭಾರತೀಯರಿಗೆ ಉಚಿತವಾಗಿ ಅಮ್ಯೂಸ್ಮೆಂಟ್ ಪಾರ್ಕ್ಗಳ ಅಗತ್ಯವಿದೆ. ಇವರೆಲ್ಲ ಮೋಜಿಗಾಗಿ ಚರಂಡಿ ನೀರಿನಲ್ಲಿ ಆಟವಾಡುತ್ತಿದ್ದಾರೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಹಿರಿಯರು ನೀರಿನಲ್ಲಿ ಮಲಗಿಕೊಂಡು ಮೋಜು ಮಾಡಿದ್ದ ಇಷ್ಟು ಕೊಳಕು ನೀರಿನಲ್ಲಿ ಹೀಗೆಲ್ಲ ಆಡಬಹುದೇ ಎಂದು ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.