ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ತಲೆ ತಲೆ ತಾಗಿಸಿ ಡೀ ಡೀ ಡಿಕ್ಕಿ ಎಂದು ಮಕ್ಕಳನ್ನು ಖುಷಿಪಡಿಸುವ ಚಟುವಟಿಕೆ ನಡೆಸುವುದು ಸಾಮಾನ್ಯ. ಮಕ್ಕಳ ಪ್ರತಿಸ್ಪಂದನೆ ನೋಡಿ ದೊಡ್ಡವರೂ ಖುಷಿಪಡುವುದುಂಟು.
ಪ್ರಾಣಿಗಳಲ್ಲೂ ಈ ರೀತಿ ಚಟುವಟಿಕೆ ನಡೆಯುವುದುಂಟೇ ಎಂಬ ಅನುಮಾನ ಬರುವಂತೆ ಪ್ರಾಣಿಗಳೆರೆಡರ ನಡುವೆ ಡಿಕ್ಕಿ ಪ್ರಸಂಗ ನಡೆದಿದ್ದು, ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಮೇಕೆ ಮರಿಯೊಂದು ಮರಿ ಗೂಳಿಯ ಜತೆಗೆ ಹೋರಾಡಲು ಪ್ರಯತ್ನಿಸುತ್ತದೆ, ಹೋರಾಟವೆಂದರೆ ಅದು ನೈಜ ಕಾಳಗವೇನಲ್ಲ. ಓಡಿ ಬಂದು ನಿಧಾನವಾಗಿ ತನ್ನ ತಲೆಯನ್ನು ಗೂಳಿ ತಲೆಗೆ ಮೆದುವಾಗಿ ತಾಗಿಸುತ್ತದೆ.
ಇದರ ಮೂಲ ವಿಡಿಯೋ ಕ್ಲಿಪ್ 2012ರ ದ್ದಾಗಿದ್ದರೂ, ಇದು ಇತ್ತೀಚೆಗೆ ಟ್ವಿಟರ್ನಲ್ಲಿ ಮರುಕಳಿಸಿತು ಮತ್ತು ಈಗ 18 ಮಿಲಿಯನ್ ವೀಕ್ಷಣೆ ಕಂಡಿದೆ. ಉತ್ತರ ಅಟ್ಲಾಂಟಿಕ್ ಮಹಾಸಾಗರದ ಮಧ್ಯದಲ್ಲಿರುವ ಅಜೋರ್ಸ್ ದ್ವೀಪಸಮೂಹದಲ್ಲಿರುವ ಜ್ವಾಲಾಮುಖಿ ಇರುವ ದ್ವೀಪವಾದ ಟೆಸಿರ್ರಾದ್ದಾಗಿದೆ ಈ 10 ಸೆಕೆಂಡ್ ಕ್ಲಿಪ್.
ಶಾಂತವಾಗಿ ನಿಂತಿರುವಾಗ ಎಳೆಯ ಗೂಳಿಯ ಕಡೆಗೆ ಮೇಕೆ ದೂರದಿಂದ ಓಡುತ್ತಿರುವುದನ್ನು ಕಾಣಬಹುದು. ಕುರಿಯು ಗೂಳಿಯ ತಲೆಯ ಹತ್ತಿರ ಬಂದಾಗ, ಅದರ ತಲೆಗೆ ಅಪ್ಪಳಿಸುವ ಬದಲು ನಿಧಾನವಾಗಿ ತಲೆಯಿಂದ ತಾಗಿಸಿಬಿಡುತ್ತೆ. ಗೂಳಿ ಕೂಡ ಪ್ರತಿರೋಧ ತೋರದೇ ಸಾವಧಾನದಿಂದ ತಲೆಯನ್ನು ತಾಗಿಸಿಕೊಳ್ಳುತ್ತದೆ.
https://twitter.com/Laughs_4_All/status/1543977281982410752?ref_src=twsrc%5Etfw%7Ctwcamp%5Etweetembed%7Ctwterm%5E1543977281982410752%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-sheep-baby-bull-wild-animal-fight-bakri-saand-ki-ladai-funny-cute-5496976%2F