ಸಂಚಾರೀ ಪೊಲೀಸರೆಂದರೆ ಸವಾರರಿಗೆ ಕಿರಿಕಿರಿ ಮಾಡುವುದನ್ನೇ ಕಾಯಕ ಮಾಡಿಕೊಂಡ ಜೀವಿಗಳು ಎಂಬ ಭಾವನೆ ಮೂಡುವಂತೆ ಮಾಡುವ ಅನೇಕ ಪೊಲೀಸರನ್ನು ನೋಡಿದ್ದೇವೆ.
ಇಂಥವರ ನಡುವೆಯೇ ಮಾನವೀಯ ವರ್ತನೆ ತೋರುವ ಮೂಲಕ ಪೊಲೀಸ್ ಸಿಬ್ಬಂದಿಯ ಪೈಕಿ ಅನೇಕರು ನಮ್ಮ ಹೃದಯ ಗೆಲ್ಲುತ್ತಾರೆ.
ಹುತಾತ್ಮ ಯೋಧನ ಸಹೋದರಿ ಮದುವೆಯಲ್ಲಿ ಅಣ್ಣನ ಸ್ಥಾನ ತುಂಬಿದ ಸಹೋದ್ಯೋಗಿಗಳು
ಇಂಥದ್ದೇ ಘಟನೆಯೊಂದರಲ್ಲಿ, ರಾಜೇಂದ್ರ ಸೋನಾವಾನೆ ಹೆಸರಿನ ಸಂಚಾರಿ ಪೊಲೀಸ್ ಪೇದೆಯೊಬ್ಬರು ದಿವ್ಯಾಂಗಿ ಹಿರಿಯ ನಾಗರಿಕರೊಬ್ಬರಿಗೆ ರಸ್ತೆ ದಾಟಲು ನೆರವಾಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಬಳಿ ಈ ಘಟನೆ ಜರುಗಿದೆ.
ತನ್ನ ಉದ್ಯೋಗಿಯೊಬ್ಬರು ಮಾಡಿದ ಅನುಕರಣೀಯ ಕೆಲಸವನ್ನು ಮುಂಬಯಿ ಪೊಲೀಸ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದೆ.
https://twitter.com/MumbaiPolice/status/1470400819920977924?ref_src=twsrc%5Etfw%7Ctwcamp%5Etweetembed%7Ctwterm%5E1470400819920977924%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fviral-video-mumbai-traffic-cop-helps-specially-abled-man-cross-road%2F840760