alex Certify Video: ಸಾವಿನ ಸನಿಹದಲ್ಲಿದ್ದಾಗ ಮಂಗನಿಂದ ಸಖತ್‌ ಪ್ಲಾನ್;‌ ಮರದಿಂದ ಕೆಳಕ್ಕೆ ಬಿದ್ದ ಹುಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video: ಸಾವಿನ ಸನಿಹದಲ್ಲಿದ್ದಾಗ ಮಂಗನಿಂದ ಸಖತ್‌ ಪ್ಲಾನ್;‌ ಮರದಿಂದ ಕೆಳಕ್ಕೆ ಬಿದ್ದ ಹುಲಿ

ಹಸಿದ ಹುಲಿಯೊಂದು ಕೋತಿಯನ್ನು ಬೇಟೆಯಾಡಲು ಯತ್ನಿಸುತ್ತಿರುವ ರೋಚಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರವೊಂದರ ಮೇಲಿದ್ದ ಕೋತಿಯನ್ನು ಬೇಟೆಯಾಡಲು ಯತ್ನಿಸಿದ ಹುಲಿ ದಯನೀಯವಾಗಿ ವಿಫಲವಾಗುತ್ತದೆ.

ಮಧ್ಯಮ ಗಾತ್ರದ ಮರದ ಮೇಲೆ ಹುಲಿ ಏರುತ್ತದೆ. ಇನ್ನೇನು ಬೇಟೆ ಸಿಕ್ಕಿತೆನ್ನುವಾಗ ಮಂಗ ಜೀವ ಉಳಿಸಿಕೊಳ್ಳಲು ಮೈಂಡ್ ಗೇಮ್ ಅಪ್ಲೇ ಮಾಡುತ್ತದೆ. ಹುಲಿಯು ಕೊಂಬೆಯ ತುದಿವರೆಗೂ ಬರುವುದನ್ನು ಕಾದು‌ ಕೊನೆ ಕ್ಷಣದಲ್ಲಿ ಜಿಗಿದುಬಿಡುತ್ತದೆ.

ಹೇಗಾದರೂ ಬೇಟೆ ಮಾಡಲೇಬೇಕೆಂದು ಹಠ ತೊಟ್ಟಂತಿದ್ದ ಹಸಿದ ಹುಲಿಗೆ ಕೋತಿಯ ಗೇಮ್ ಪ್ಲಾನ್ ಅರ್ಥವಾಗಲಿಲ್ಲ. ಮರದ ಕೊಂಬೆಯ ತುದಿವರೆಗೂ ಬರುತ್ತದೆ. ಅಂತಿಮವಾಗಿ ಆಯತಪ್ಪಿ ನೆಲಕ್ಕೆ ಬಿದ್ದುಬಿಡುತ್ತದೆ, ಮಂಗ ಸೇಫ್ ಆಗುತ್ತದೆ.

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಹಾಲತ್ ಕಾ ‘ಶಿಕಾರ್’ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಕ್ಲಿಪ್ 174k ವೀಕ್ಷಣೆ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...