ರ್ಯಾಂಪ್ ವಾಕ್ ಮಾಡುವ ವೇಳೆ ಸಾಕಷ್ಟು ಮಾಡೆಲ್ಗಳು ಆಯತಪ್ಪಿ ಬಿದ್ದ ವಿಡಿಯೋಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಲೇ ಇರುತ್ತದೆ. ಆದರೆ ಈ ರೀತಿ ಮುಜುಗರಕ್ಕೆ ಒಳಗಾದ ಬಳಿಕವೂ ಮಾಡೆಲ್ಗಳು ಹೇಗೆ ಅದನ್ನು ಸ್ವೀಕರಿಸುತ್ತಾರೆ ಅನ್ನೋದು ಮುಖ್ಯವಾದ ವಿಷಯ.
ಇದೇ ರೀತಿಯ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಧುವಣಗಿತ್ತಿಯಂತೆ ತಯಾರಾಗಿದ್ದ ಮಾಡೆಲ್ ಒಬ್ಬಾಕೆ ಫ್ಯಾಶನ್ ಶೋ ವೇಳೆ ಆಯತಪ್ಪಿ ಬಿದ್ದಿದ್ದಾರೆ.
‘ಒನ್ ಮ್ಯಾನ್ ಆರ್ಕೆಸ್ಟ್ರಾ’ ಖ್ಯಾತಿಯ ಸಾಂಟಿಯಾಗೊ ವಿಡಿಯೊ ಭಾರಿ ವೈರಲ್
ವಿಡಿಯೋದಲ್ಲಿ ಮಾಡೆಲ್ಗಳ ಗುಂಪು ಮಧುವಣಗಿತ್ತಿಯಂತೆ ತಯಾರಾಗಿತ್ತು. ಅತೀ ಸುಂದರವಾದ ಲೆಹೆಂಗಾ ಹಾಗೂ ಅತ್ಯಾಕರ್ಷಕ ಆಭರಣಗಳನ್ನು ಧರಿಸಿದ್ದರು. ಒಬ್ಬರಾದ ಮೇಲೆ ಒಬ್ಬರಂತೆ ಸರದಿ ಸಾಲಿನಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದ ವೇಳೆ ಓರ್ವ ಮಾಡೆಲ್ ರ್ಯಾಂಪ್ನಲ್ಲಿ ಆಯತಪ್ಪಿದ್ದಾರೆ.
ಬೀಳುವ ಭರದಲ್ಲಿ ಈಕೆ ತಮ್ಮ ಮುಂದಿದ್ದ ಮತ್ತೊಬ್ಬ ಮಾಡೆಲ್ ತಲೆಯ ಮೇಲಿದ್ದ ದುಪ್ಪಟ್ಟಾವನ್ನೂ ಎಳೆದಿದ್ದಾರೆ. ಈಕೆಯ ಹಿಂದಿದ್ದ ಮಾಡೆಲ್ ಆಕೆಯನ್ನು ಮೇಲೆತ್ತಲು ನೆರವಾಗಿದ್ದಾರೆ.
https://www.youtube.com/watch?v=mSdz6-QMJ4M