ಸಮಯ ಸಂದರ್ಭಕ್ಕೆ ತಕ್ಕಂತೆ ಸಮಸ್ಯೆ ಪರಿಹಾರಕ್ಕೆ ತಮ್ಮದೇ ಟೆಕ್ನಿಕ್ ಬಳಸುವವರ ಸಂಖ್ಯೆಗೇನು ಕಡಿಮೆ ಇಲ್ಲ. ಇಲ್ಲೊಬ್ಬ ಮಹಾಶಯ ಮಳೆಯಿಂದ ನೀರು ನಿಂತ ರಸ್ತೆಯಲ್ಲಿ ಪ್ಲಾಸ್ಟಿಕ್ ಸ್ಟೂಲ್ ಬಳಸಿ ದಾಟಿರುವುದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ಮೊಣಕಲು ಉದ್ದದಷ್ಟು ನೀರು ತುಂಬಿದ ಪ್ರದೇಶವನ್ನು ದಾಟಲು ವ್ಯಕ್ತಿಯೊಬ್ಬ ಎರಡು ಸ್ಟೂಲ್ ಬಳಸಿದ್ದಾನೆ. ಸ್ಟೂಲ್ ಗೆ ಹಗ್ಗ ಕಟ್ಟಿದ್ದು, ನೀರಿರುವ ಪ್ರದೇಶದಲ್ಲಿ ಸ್ಟೂಲನ್ನು ದಾರದ ಸಹಾಯದಿಂದ ಎತ್ತಿಟ್ಟುಕೊಳ್ಳುತ್ತಾ ಮುಂದೆ ಸಾಗುತ್ತಾನೆ.
ಈತನ ಪ್ರಯತ್ನ ನೆಟ್ಟಿಗರಿಗೆ ಇಷ್ಟವಾಗಿದ್ದು, ಆ ವಿಡಿಯೋ ವೈರಲ್ ಆಗಿದೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ವಿಡಿಯೋ ಶೇರ್ ಮಾಡಿದ್ದಾರೆ. ಅವರು ನೀಡಿರುವ ಶೀರ್ಷಿಕೆ ಕೂಡ ಗಮನ ಸೆಳೆಯುವಂತಿದೆ. ಟ್ವಿಟರ್‌ನಲ್ಲಿ 1.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ ವಿಡಿಯೋ ಸಾವಿರಾರು ಪ್ರತಿಕ್ರಿಯೆ ಪಡೆಯುತ್ತಿದೆ.