alex Certify ಹುಂಜನ ಸಿಟ್ಟು ಬಲ್ಲಿರಾ ? ಕೆಣಕಲು ಹೋದವನ ಸ್ಥಿತಿ ಏನಾಯ್ತು ಅಂತ ನೀವೇ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಂಜನ ಸಿಟ್ಟು ಬಲ್ಲಿರಾ ? ಕೆಣಕಲು ಹೋದವನ ಸ್ಥಿತಿ ಏನಾಯ್ತು ಅಂತ ನೀವೇ ನೋಡಿ

ಕೆಲವರಿಗೆ ಪ್ರಾಣಿ, ಪಕ್ಷಿಗಳನ್ನು ಕಂಡರೆ ಅದನ್ನು ಕೆಣಕುವುದು, ಹಿಂಸೆ ಕೊಡುವುದು ಎಂದರೆ ತುಂಬಾ ಇಷ್ಟ. ಕೆಲವೊಮ್ಮೆ ಅಪಾಯಕಾರಿ ಪ್ರಾಣಿಗಳಿಗೂ ಹೀಗೆ ಮಾಡಲು ಹೋಗಿ ಜೀವ ಕಳೆದುಕೊಂಡಿರುವ ಉದಾಹರಣೆಗಳು ಇವೆ. ಇವು ಅಪಾಯಕಾರಿ ಪ್ರಾಣಿ-ಪಕ್ಷಿಗಳ ಮಾತಾದರೆ ಹುಂಜ ಇನ್ನೇನು ಮಾಡಲು ಸಾಧ್ಯ ಎಂದು ಕೆಣಕಲು ಹೋಗಿದ್ದಾನೆ ಒಬ್ಬ ಹುಡುಗ.

ಹುಂಜಗಳು ಕೆಲವೊಮ್ಮ ಆಕ್ರಮಣಕಾರಿಯಾಗಿರುತ್ತವೆ ಎಂಬ ಮಾತನ್ನು ಕೇಳಿದ್ದರೆ ಈ ವಿಡಿಯೋ ನೋಡಿ. ಸುಮ್ಮನೇ ನಿಂತಿದ್ದ ಹುಂಜವನ್ನು ಹುಡುಗನೊಬ್ಬ ಕೆಣಕಲು ಹೋಗಿದ್ದಾನೆ. ಕೋಲನ್ನು ಕೈಯಲ್ಲಿ ಹಿಡಿದು ಹುಂಜಕ್ಕೆ ಹೊಡೆಯಲು ಮುಂದಾಗಿದ್ದಾನೆ. ತಾನೇನೋ ದೊಡ್ಡ ಸಾಹಸ ಮಾಡುತ್ತಿರುವುದಾಗಿ ಅಂದುಕೊಂಡಿರುವ ಈತ ಅದನ್ನು ವಿಡಿಯೋ ಮಾಡುವಂತೆ ಸ್ನೇಹಿತನಿಗೆ ಹೇಳಿದ್ದ.

ಆದರೆ ಕೊನೆಗೆ ಆಗಿದ್ದೇ ಬೇರೆ. ಕೋಲು ಹಿಡಿದುಕೊಂಡು ಹೊಡೆಯಬೇಕು ಎನ್ನುವಷ್ಟರಲ್ಲಿಯೇ ಅಪಾಯವನ್ನು ಅರಿತ ಹುಂಜ ಆತನತ್ತ ತಿರುಗಿಬಿದ್ದಿದೆ. ಇದರಿಂದ ಗಾಬರಿಗೊಂಡ ಆತ ಕಾಲ್ಕಿತ್ತಿದ್ದಾನೆ. ದೊಡ್ಡದಾಗಿ ಕಿರುಚುತ್ತಾ ಭಯದಿಂದ ಆತ ಓಡಿದರೆ ಆತನ ಬೆನ್ನಟ್ಟಿ ಹುಂಜ ಹೋಗಿದೆ. ಓಡುವ ವೇಗದಲ್ಲಿ ಹುಡುಗ ಮೇಲಿನಿಂದ ಕೆಳಕ್ಕೆ ಬಿದ್ದಿದ್ದು ಇದರ ವಿಡಿಯೋ ವೈರಲ್​ ಆಗಿದೆ. ಹುಡುಗನಿಗೆ ತಕ್ಕಶಾಸ್ತಿಯಾಯ್ತು ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...