ಜನರಲ್ಲಿರುವ ಪ್ರಾಣಿ ಪ್ರೇಮದ ಅನೇಕ ಉದಾಹರಣೆಗಳು ಸಾಮಾಜಿಕ ಜಾಲತಾಣದಲ್ಲಿ ಆಗಿಂದಾಗ್ಗೆ ಪ್ರಕಟವಾಗುತ್ತಿರುತ್ತದೆ.
ಪ್ರಾಣಿಪ್ರೇಮಿಯೊಬ್ಬರು ಮಂಗಗಳಿಗೆ ಬಾಳೆಹಣ್ಣಿನ ಔತಣ ನೀಡಲು ನಿರ್ಧರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮನಗೆಲ್ಲುತ್ತಿದೆ. 15 ಸೆಕೆಂಡುಗಳ ವಿಡಿಯೊದಲ್ಲಿ, ಹೃದಯ ವೈಶಾಲ್ಯ ಹೊಂದಿದ ಆ ವ್ಯಕ್ತಿ ನೂರಾರು ಬಾಳೆಹಣ್ಣುಗಳಿಂದ ತುಂಬಿದ ತನ್ನ ಕಾರಿನ ಡೋರ್ ತೆರೆಯುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ ಹಸಿದ ಕೋತಿಗಳ ಸಂಪೂರ್ಣ ಸೈನ್ಯವು ಅಲ್ಲಿ ಸೇರುತ್ತದೆ ಮತ್ತು ಬಾಳೆಹಣ್ಣು ತಿನ್ನಲು ಪ್ರಾರಂಭಿಸುತ್ತವೆ.
ಬಾಳೆಹಣ್ಣು ಮಂಗಗಳಿಗೆ ಹೆಚ್ಚು ಇಷ್ಟವಾದ ಆಹಾರಗಳಲ್ಲಿ ಒಂದಾಗಿದೆ. ಖುಷಿಯಿಂದ ಅವು ತಿನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಮಂಗಗಳು ಖುಷಿಯಿಂದ ಸತ್ಕಾರ ಸ್ವೀಕರಿಸುವುದನ್ನು ಕಣ್ಣುತುಂಬಿಕೊಂಡ ನೆಟ್ಟಿಗರು ಖುಷಿಯಾಗಿದ್ದಾರೆ.
ಈ ವಿಡಿಯೊವನ್ನು ಕ್ರಿಯೇಚರ್ ಆಫ್ ಗಾಡ್ ಎಂಬ ಟ್ವಿಟ್ಟರ್ ಖಾತೆಯು “ಹ್ಯಾಪಿ ಸಂಡೇ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ.
ವಿಡಿಯೊ ಸುಮಾರು 1.5 ಮಿಲಿಯನ್ ವೀಕ್ಷಣೆಯಾಗಿದ್ದು, ನೂರಾರು ಮಂದಿ ಕಾಮೆಂಟ್ ಮಾಡಿ ಖುಷಿಪಟ್ಟಿದ್ದಾರೆ.
https://twitter.com/mdumar1989/status/1535944730231689219?ref_src=twsrc%5Etfw%7Ctwcamp%5Etweetembed%7Ctwterm%5E1535944730231689219%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-man-throws-banana-feast-for-monkeys-bandar-ki-party-netizens-love-kind-gesture-5512426%2F