ಪಫರ್ ಫಿಶ್ ಅಥವಾ ಬ್ಲೋಫಿಶ್ ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ಮೀನುಗಳಲ್ಲಿ ಒಂದು. ಅವು ಕುಟುಕುವುದಿಲ್ಲ ಅಥವಾ ಕಚ್ಚುವುದೂ ಇಲ್ಲ. ಹಲವಾರು ರಕ್ಷಣಾ ಕಾರ್ಯವಿಧಾನಗಳನ್ನು ಅವು ಹೊಂದಿದ್ದು, ಅವು ವಿಷಕಾರಿಯಾಗಿರುವುದರಿಂದ ಪ್ರಾಣಿಗಳು ಮತ್ತು ಮನುಷ್ಯರಿಗೂ ಸಹ ಅಪಾಯ.
ಈ ಅಪಾಯದ ಹೊರತಾಗಿಯೂ ದಕ್ಷಿಣ ಕೊರಿಯಾ, ಚೀನಾ ಮತ್ತು ಜಪಾನ್ನಂತಹ ದೇಶಗಳು ಪಫರ್ ಮೀನುಗಳನ್ನು ಅಡುಗೆ ಮನೆಯ ಸವಿಯಾದ ಪದಾರ್ಥವೆಂದು ಪರಿಗಣಿತವಾಗಿದೆ. ವಿಶೇಷವಾಗಿ ತರಬೇತಿ ಪಡೆದ ಬಾಣಸಿಗರಿಗೆ ಮಾತ್ರ ಅವುಗಳನ್ನು ಸುರಕ್ಷಿತವಾಗಿ ಬಳಕೆ ಮಾಡಬೇಕೆಂಬುದು ತಿಳಿದಿದೆ.
ಪಫರ್ಫಿಶ್ ಮುಳ್ಳುಗಳಿಂದ ಮುಚ್ಚಿಕೊಂಡಿರುತ್ತದೆ, ಆ ಮುಳ್ಳು ಮಾರಣಾಂತಿಕ ವಿಷದೊಂದಿಗೆ ಹಾನಿ ಮಾಡುತ್ತದೆ. ಈ ಕಾರಣಕ್ಕಾಗಿ, ಕೈಯಿಂದ ಪಫರ್ ಫಿಶ್ ಸ್ಪರ್ಶಿಸುವುದು ಸುರಕ್ಷಿತವಲ್ಲ. ಇದನ್ನು ತಿಳಿದಿದ್ದರೂ, ಒಬ್ಬ ವ್ಯಕ್ತಿಯು ಪಫರ್ ಫಿಶ್ನೊಂದಿಗೆ ಆಟವಾಡಲು ಹೋಗಿ ಕಣ್ಣೀರು ಹಾಕಿದ್ದಾನೆ.
ಈ ವಿಡಿಯೋವನ್ನು ವೈಲ್ಡ್ಲೈಫ್ ಅನಿಮಲ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು 157ಕೆ ವೀಕ್ಷಣೆಯಾಗಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.
ಒಬ್ಬ ವ್ಯಕ್ತಿಯು ನೀರಿನಿಂದ ತೆಗೆದ ಪಫರ್ಫಿಶ್ ಅನ್ನು ಚುಚ್ಚುತ್ತಿರುವುದನ್ನು ಕಾಣಬಹುದು. ಮನುಷ್ಯ ಅದರೊಂದಿಗೆ ಆಟವಾಡುತ್ತಿದ್ದಾಗ ಮೀನು ಇನ್ನೂ ಜೀವಂತವಾಗಿತ್ತು ಮತ್ತು ಅದರ ಒಂದು ಮುಳ್ಳು ಅವನ ಬೆರಳಿಗೆ ಸಿಕ್ಕಿಕೊಂಡಿತು. ನಂತರ ಆ ವ್ಯಕ್ತಿ ಮೀನಿನಿಂದ ತನ್ನ ಕೈಯನ್ನು ಬಿಡಿಸಿಕೊಳ್ಳುವಾಗ ಕಿರುಚುತ್ತಾನೆ.