alex Certify ಗ್ಲಾಸ್​, ನೀರು, ಹಣ್ಣು ಇಲ್ಲದಿದ್ದರೂ ಪಾನೀಯ ತಯಾರಿಸಿದ ಯುವಕ…! ಇದೇನು ಅಂತೀರಾ ? ಈ ವಿಡಿಯೋ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಲಾಸ್​, ನೀರು, ಹಣ್ಣು ಇಲ್ಲದಿದ್ದರೂ ಪಾನೀಯ ತಯಾರಿಸಿದ ಯುವಕ…! ಇದೇನು ಅಂತೀರಾ ? ಈ ವಿಡಿಯೋ ನೋಡಿ

ಕೆಲವರಿಗೆ ವಿವಿಧ ರೀತಿಯ ನೃತ್ಯ ಕಲೆಗಳು ಕರಗತವಾಗಿರುತ್ತವೆ. ಇಲ್ಲದ ವಸ್ತುಗಳನ್ನೂ ಇರುವಂತೆ ಕಲ್ಪಿಸಿಕೊಂಡು ನೃತ್ಯ ಮಾಡುವ ಅದ್ಭುತ ಕಲೆ ತಿಳಿದಿರುತ್ತದೆ. ಅವರು ಏನೋ ಒಂದು ವಸ್ತುವನ್ನು ನಟನೆ ಮೂಲಕ ತೋರಿಸಿದರೆ, ಆ ವಸ್ತು ಇಲ್ಲದಿದ್ದರೂ ಇದೆಯೇನೋ ಎಂಬ ಕಲ್ಪನೆ ಮೂಡುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಕೇವಲ ಸನ್ನೆಯ ಮೂಲಕ ಯುವಕನೊಬ್ಬ ಇಲ್ಲದ ವಸ್ತುವನ್ನು ಇರುವಂತೆ ತಮ್ಮ ನೃತ್ಯದ ಮೂಲಕ ತೋರಿಸಿದ್ದಾನೆ. ಈ ಯುವಕ ತಮಾಷೆಯ ಮುಖಗಳನ್ನು ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಪಾನೀಯವನ್ನು ತಯಾರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಕೇವಲ ನಟನೆಯ ಮೂಲಕ ಈತ ತೋರಿಸುತ್ತಾನೆ.

ಮದುವೆ ಮನೆಯಲ್ಲಿ ಯುವಕ ಈ ರೀತಿ ಅಲ್ಲಿದ್ದವರನ್ನು ರಂಜಿಸಿದ್ದಾನೆ, ಕೆಲವು ಬಾಟಲಿಗಳು ಇದ್ದು, ಅವುಗಳಲ್ಲಿ ನೀರನ್ನು ಹಾಕುವಂತೆ, ನಂತರ ಪಾನೀಯ ತಯಾರಿಸುವಂತೆ ಆತ ನಟಿಸಿದ್ದು, ಅಲ್ಲಿ ಬಾಟಲಿಯಾಗಲೀ, ನೀರಾಗಲೀ ಇಲ್ಲವೆಂದು ಅನಿಸುವುದೇ ಇಲ್ಲ, ಅಷ್ಟು ನೈಜತೆಯಿಂದ ನಟನೆ ಕೂಡಿದ್ದು, ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಇದಾಗಲೇ ಸಹಸ್ರಾರು ಮಂದಿ ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದು, ಇಂಥ ಅಪರೂಪದ ಕಲೆ ಇನ್ನಷ್ಟು ಮುನ್ನಲೆಗೆ ಬರಬೇಕು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...