ರಾತ್ರಿ ವೇಳೆ ದೂರದ ಊರಿಗೆ ರೈಲು ಪ್ರಯಾಣ ಮಾಡಬೇಕೆಂದ್ರೆ ಸ್ಲೀಪರ್ ಕೋಚ್ ಅನ್ನು ಬುಕ್ ಮಾಡಬೇಕಾಗುತ್ತದೆ. ಒಂದು ವೇಳೆ ನಿಮಗೆ ಆಸನ ಸಿಗದೇ ಇದ್ದಲ್ಲಿ ಅನಿವಾರ್ಯವಾಗಿ ಜನರಲ್ ಬೋಗಿ ರೈಲನ್ನು ಏರಬೇಕಾಗುತ್ತದೆ. ಆದರೆ, ನಿದ್ದೆ ತಡೆಯದಿದ್ದಾಗ ಮಲಗುವುದು ಹೇಗೆ ಎಂಬ ಚಿಂತೆ ಇದ್ದೇ ಇರುತ್ತದೆ. ಇಲ್ಲೊಬ್ಬ ವ್ಯಕ್ತಿ ಮಾಡಿರೋ ಮಾಸ್ಟರ್ ಪ್ಲಾನ್ ನಿಮಗೂ ನಾಳೆ ಉಪಯೋಗಕ್ಕೆ ಬರಬಹುದು ನೋಡಿ !
ಹೌದು, ರೈಲಿನಲ್ಲಿ ಮಲಗಲು ಜಾಗವಿಲ್ಲದೇ ಇದ್ದುದರಿಂದ ವ್ಯಕ್ತಿಯೊಬ್ಬ ಬಟ್ಟೆಯ ಸಹಾಯದಿಂದ ಜೋಕಾಲಿ ರೀತಿ ಮಾಡಿ ಅದರಲ್ಲಿ ಮಲಗಿದ್ದಾನೆ. ರೈಲು ಕೋಚ್ ಸಂಪೂರ್ಣವಾಗಿ ತುಂಬಿದ್ದರಿಂದ ವ್ಯಕ್ತಿಗೆ ರೈಲಿನಲ್ಲಿ ಆಸನ ಸಿಕ್ಕಿರಲಿಲ್ಲ. ನೆಲವನ್ನು ಹೊರತುಪಡಿಸಿ ಮಲಗಲು ಬೇರೆ ಸ್ಥಳವಿರಲಿಲ್ಲ.
ಇದಕ್ಕಾಗಿ ವಿನೂತನ ಉಪಾಯ ಹೂಡಿದ ಆತ, ತನ್ನ ಬೆಡ್‌ಶೀಟ್ ತೆಗೆದುಕೊಂಡು ಒಂದು ತುದಿಯನ್ನು ಲಗೇಜ್ ಹೋಲ್ಡರ್‌ನಲ್ಲಿ ಮತ್ತು ಇನ್ನೊಂದು ತುದಿಯನ್ನು ಆಸನಕ್ಕೆ ಕಟ್ಟಿದ್ದಾನೆ. ಇದು ಪುಟ್ಟ ಮಕ್ಕಳನ್ನು ಸೀರೆಯ ಜೋಕಾಲಿಯಲ್ಲಿ ಮಲಗಿಸುವ ರೀತಿಯಲ್ಲಿದೆ. ಬಳಿಕ ವ್ಯಕ್ತಿಯು ಆರಾಮಾಗಿ ಅದರಲ್ಲಿ ಮಲಗಿದ್ದಾನೆ. ಇನ್ನು ರೈಲಿನಲ್ಲಿದ್ದ ಇತರೆ ಪ್ರಯಾಣಿಕರು ಈತನ ಉಪಾಯಕ್ಕೆ ಮೂಕವಿಸ್ಮಿತರಾಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅಂದಿನಿಂದ ಈ ವಿಡಿಯೋವನ್ನು 72,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರಂತೂ ಈ ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ.
https://www.youtube.com/watch?v=Mf27kX07Uzw