ನಟ ಹೃತಿಕ್ ರೋಷನ್ ನಟಿಸಿದ ಕ್ರಿಶ್ ಚಲನಚಿತ್ರದಲ್ಲಿ ಮರ ಹತ್ತುವ ದೃಶ್ಯ ಇಂದಿಗೂ ಜನಪ್ರಿಯ. ಚಲನಚಿತ್ರವು ಬಿಡುಗಡೆಯಾದಾಗಿನಿಂದ ಅನೇಕರು ಆ ಸಾಹಸ ದೃಶ್ಯ ಮರುಸೃಷ್ಟಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ಈಗ, ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ನಿಜವಾದ- ಕ್ರಿಶ್ ಶೈಲಿಯಲ್ಲಿ ಮರ ಇಳಿಯುತ್ತಿರುವುದನ್ನು ತೋರಿಸುವ ವಿಡಿಯೊ ಕಾಣಿಸಿಕೊಂಡಿದೆ. ಆ ಸಾಹಸಿ ತನ್ನ ಬರಿಗೈಯಿಂದ ಮರವನ್ನು ಹತ್ತುತ್ತಾನೆ. ಸಲೀಸಾಗಿ ಕೊಂಬೆಗಳಿಗೆ ನೇತಾಡುತ್ತಾ ಕೆಳಗಿಳಿಯುತ್ತಾನೆ. “ಬಾಹುಬಲಿ” ಎಂಬ ಶೀರ್ಷಿಕೆಯೊಂದಿಗೆ ಘಂಟಾ ಎಂಬ ಇನ್ಸ್ಟಾಗ್ರಾಮ್ ಪುಟವು ವಿಡಿಯೊವನ್ನು ಹಂಚಿಕೊಂಡಿದೆ.
ಅನೇಕ ನೆಟ್ಟಿಗರು ಶೀರ್ಷಿಕೆ ಸರಿಪಡಿಸಿದ್ದಾರೆ, ಈ ಸಾಹಸವು ಕ್ರಿಶ್ ಅನ್ನು ಹೋಲುತ್ತದೆ, ಬಾಹುಬಲಿ ಅಲ್ಲ ಎಂದು ಹೇಳಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರನ್ನು ರಂಜಿಸಿದೆ.