
ಹಾಗೆಯೇ ಮಕ್ಕಳಿಗೂ ದಯೆ, ಕರುಣೆ, ಪ್ರೀತಿ ಅನ್ನೋದು ತುಸು ಹೆಚ್ಚೇ ಇರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ನಾಯಿಮರಿಯ ಬಾಯಾರಿಕೆ ನೀಗಿಸಿದ ಬಾಲಕನ ವಾತ್ಸಲ್ಯಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ.
ಪುಟ್ಟ ಬಾಲಕನೊಬ್ಬ, ಬಾಯಾರಿದ ನಾಯಿಮರಿಗೆ ಬೋರ್ ವೆಲ್ ಪಂಪ್ ನಿಂದ ನೀರು ಕುಡಿಸಲು ತನ್ನಿಂದಾದಷ್ಟು ಪ್ರಯತ್ನ ಪಟ್ಟಿದ್ದಾನೆ. ಭಾರವಾದ ಪಂಪ್ ಹ್ಯಾಂಡಲ್ ಎತ್ತಲು ಕಷ್ಟವಾದ್ರೂ ಕೂಡ, ಬಾಲಕ ತನ್ನ ಶಕ್ತಿ ಮೀರಿ ಪ್ರಯತ್ನಿಸಿದ್ದು, ಇದರಿಂದ ನೀರಿನ ಹನಿ ಹೊರಬರುತ್ತಿದ್ದಂತೆ ಬಾಯಾರಿದ ನಾಯಿಮರಿಯು ಹಾಯಾಗಿ ನೀರು ಕುಡಿದು, ತನ್ನ ಬಾಯಾರಿಕೆಯನ್ನು ನೀಗಿಸಿಕೊಂಡಿದೆ.
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಎಷ್ಟೇ ಚಿಕ್ಕವರಾದರೂ ಯಾರು ಯಾರಿಗೆ ಬೇಕಿದ್ದರೂ ಸಾಧ್ಯವಾದಷ್ಟು ಸಹಾಯ ಮಾಡಬಹುದು ಎಂಬ ಶೀರ್ಷಿಕೆ ನೀಡಿದ್ದಾರೆ.
ಬಾಲಕನ ಕರುಣೆ, ಔದಾರ್ಯದ ವಿಡಿಯೋ ನೋಡಿದ ನೆಟ್ಟಿಗರ ಹೃದಯ ಕರಗಿದೆ. ಮಾನವೀಯತೆಗೆ ವಯಸ್ಸು, ಎತ್ತರ, ಶ್ರೀಮಂತಿಕೆ ಎಂದೂ ಅಡ್ಡಿ ಬರುವುದಿಲ್ಲ. ಇದು ಹೃದಯದಿಂದ ಬರುತ್ತದೆ ಎಂಬಂತಹ ಕಾಮೆಂಟ್ ಗಳನ್ನು ಬಳಕೆದಾರರು ಮಾಡಿದ್ದಾರೆ. ಇನ್ನೂ ಕೆಲವರು ಇಂತಹ ಮುದ್ದಾದ ವಿಡಿಯೋ ಹಂಚಿಕೊಂಡ ಅಧಿಕಾರಿಗೆ ಧನ್ಯವಾದ ತಿಳಿಸಿದ್ದಾರೆ.