ವನ್ಯಜೀವಿ ಛಾಯಾಗ್ರಹಣ ಎನ್ನುವುದು ಎಷ್ಟು ರೋಚಕವೋ, ಅಷ್ಟೇ ಮಟ್ಟದಲ್ಲಿ ಅಗಾಧವಾದ ತಾಳ್ಮೆಯನ್ನು ಕೂಡ ಬಯಸುತ್ತದೆ. ಕಾದು ಕುಳಿತು ಪ್ರಕೃತಿಯಲ್ಲಿನ ಆಗುಹೋಗುಗಳನ್ನು ಸೆರೆಹಿಡಿಯಬೇಕಾಗುತ್ತದೆ. ನ್ಯಾಷನಲ್ ಜಿಯೊಗ್ರಾಫಿಕ್, ಡಿಸ್ಕವರಿ ಚಾನಲ್ಗಳಲ್ಲಿಇಂಥ ಅತ್ಯಂತ ಅಪರೂಪದ ಪ್ರಾಣಿಗಳ ಕಾರ್ಯಚಟುವಟಿಕೆಗಳ ವಿಡಿಯೊಗಳನ್ನು ಕಣ್ಣು ಮಿಟುಕಿಸದೆಯೇ ನೋಡಿದ್ದೇವೆ, ಅಲ್ಲವೇ?
ಅಂತಹದ್ದೇ ಒಂದು ಬೇಟೆಗಾಗಿ ನಡೆದ ಹೋರಾಟದ ವಿಡಿಯೊ ಸದ್ಯ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಒಂದು ಸಿಂಹಿಣಿಯು ತನ್ನ ಬೇಟೆಗಾಗಿ ನೀರಿಗೆ ಇಳಿದು ಮೊಸಳೆಯೊಂದಿಗೆ ಹೋರಾಟ ನಡೆಸುತ್ತದೆ. ಸುಮಾರು 1 ನಿಮಿಷಕ್ಕೂ ಹೆಚ್ಚು ಅವಧಿಯ ಈ ವಿಡಿಯೊ ತುಣುಕು ಭಾರಿ ವೈರಲ್ ಆಗಿದೆ.
ಜೆಟ್ ಸ್ಕೀ ಬಳಸಿಕೊಂಡು ದೋಣಿಗೆ ಹೊತ್ತಿದ್ದ ಬೆಂಕಿ ನಂದಿಸಿದ ಫೈರ್ಫೈಟರ್
ಒಂದೇ ಜಿಂಕೆಗಾಗಿ ಸಿಂಹಿಣಿ ಮತ್ತು ಮೊಸಳೆ ಕಚ್ಚಾಟ ನಡೆಸುವ ಅಪರೂಪದ ವಿಡಿಯೊ ಇದು. ಹಲ್ಲುಗಳಿಂದ ಕಚ್ಚಿಕೊಂಡು ಜಿಂಕೆಯನ್ನು ಎಳೆದಾಡುವ ಮೊಸಳೆಗೆ , ಇದು ನನ್ನ ಶಿಕಾರಿ ಎಂದು ಸಿಂಹಿಣಿಯು ಹೇಳುವಂತೆ ಜಿಂಕೆಗೆ ಬಾಯಿ ಹಾಕುತ್ತದೆ.
ಕೊನೆಗೆ ಮೊಸಳೆಯ ಸಮೇತವಾಗಿ ಜಿಂಕೆಯ ದೇಹವನ್ನು ನೀರಿನಿಂದ ಆಚೆಗೆ ಎಳೆದು ಹಾಕುತ್ತದೆ ಸಿಂಹಿಣಿ.