alex Certify ನದಿಯಲ್ಲಿ ಮೊಸಳೆಗಳೊಂದಿಗೆ ಕಾದಾಟಕ್ಕಿಳಿದ ಸಿಂಹ..! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನದಿಯಲ್ಲಿ ಮೊಸಳೆಗಳೊಂದಿಗೆ ಕಾದಾಟಕ್ಕಿಳಿದ ಸಿಂಹ..! ವಿಡಿಯೋ ವೈರಲ್

Viral Video: Lions Fight Crocodiles in River As Their Day Hunt Turns Intense. Watchನೀವು ದಟ್ಟಾರಣ್ಯದಲ್ಲಿ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಸಿಂಹ ಘರ್ಜನೆ ಕೇಳಿದ್ರೆ ಒಂದು ಕ್ಷಣ ಭಯ ಬೀಳೋದು ಖಚಿತ. ಸಾಮಾನ್ಯವಾಗಿ ಸಿಂಹಗಳು ತಮ್ಮ ಬೇಟೆಯನ್ನು ಅತ್ಯಂತ ನಿಖರವಾಗಿ ಕಂಡುಹಿಡಿದು ಬಹಳ ಸಲೀಸಾಗಿ ಹಿಡಿದುಬಿಡುತ್ತವೆ. ಸಾಮಾನ್ಯವಾಗಿ ಅದರ ಬೇಟೆಯಲ್ಲಿ, ಎಮ್ಮೆಗಳು, ಜೀಬ್ರಾಗಳು, ಮರಿ ಆನೆಗಳು, ಕಾಡು ಹಂದಿಗಳು, ಮೊಸಳೆಗಳು ಮತ್ತು ಜಿರಾಫೆಗಳು ಸೇರಿವೆ.

ಹೆಚ್ಚಿನ ಬಾರಿ ಸಿಂಹಗಳು ರಾತ್ರಿ ವೇಳೆ ಬೇಟೆಯಾಡುತ್ತವೆ. ಇದೀಗ ವೈರಲ್ ಆಗಿರೋ ಈ ವಿಡಿಯೋದಲ್ಲಿ, ಹಗಲಿನಲ್ಲಿ ಬೇಟೆಯಾಡುವುದನ್ನು ಕಾಣಬಹುದು. ವಿಡಿಯೋವನ್ನು ಕೆಲವು ದಿನಗಳ ಹಿಂದೆ ವೈಲ್ಡ್ ಎನಿಮಲ್ ಶಾರ್ಟ್ಸ್ ಎಂಬ ಇನ್ಸ್ಟಾಗ್ರಾಂ ಪುಟದಿಂದ ಅಪ್‌ಲೋಡ್ ಮಾಡಲಾಗಿದೆ. ಇದು 1.27 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.

ನೀರಿನಲ್ಲಿ ದೊಡ್ಡ ಗುಂಪಿನ ಮೊಸಳೆಗಳು ಬಲಿಗಾಗಿ ಬಾಯ್ದೆರೆದು ಕಾದು ಕುಳಿತಿವೆ. ಈ ವೇಳೆ ಅಲ್ಲಿ ಬಂದ ಸಿಂಹವು ಆಳವಿಲ್ಲದ ನೀರಿನಲ್ಲಿ ಮೊಸಳೆಯನ್ನು ಬೇಟೆಯಾಡಲು ಪ್ರಯತ್ನಿಸುತ್ತಿದೆ. ಸಿಂಹವು ನದಿಯ ದಡದಿಂದಲೇ ನಿಂತು ಮೊಸಳೆಯತ್ತ ನೋಡುತ್ತಿರುವುದನ್ನು ವಿಡಿಯೋ ತೋರಿಸುತ್ತದೆ.

ಸಿಂಹವು ಆಕ್ರಮಣಕಾರಿಯಾಗಿ ತನ್ನನ್ನು ತಾವು ರಕ್ಷಿಸಿಕೊಳ್ಳುವ ಸಲುವಾಗಿ ಮೊಸಳೆಗಳ ದೊಡ್ಡ ಗುಂಪನ್ನು ಎದುರಿಸುತ್ತಿದೆ. ಹೆಣ್ಣು ಸಿಂಹವು ಮೊಸಳೆಯೊಂದಿಗೆ ತೀವ್ರ ಕಾದಾಟದಲ್ಲಿ ತೊಡಗಿದೆ. ಈ ವೇಳೆ ಮೊಸಳೆ ಕೂಡ ತಕ್ಕ ಪ್ರತಿರೋಧ ತೋರಿದೆ. ಅದು ತನ್ನ ಹಲ್ಲುಗಳಿಂದ ಸಿಂಹದ ಮೇಲೆ ಆಕ್ರಮಣ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...