ಬಾಲಿವುಡ್ ಚಲನಚಿತ್ರ ಬಾರ್ಡರ್ ಬೆಳ್ಳೆ ತೆರೆಯಮೇಲೆ ಕಾಣಿಸಿಕೊಂಡು 25 ವರ್ಷ, ಈಗಲೂ ಆ ಚಿತ್ರದ ಹಾಡು ಜನಜನಿತ. ಲಡಾಖಿ ಜಾನಪದ ಕಲಾವಿದರು ದೇಶದ ಗಡಿಯಲ್ಲಿ ನಿಂತು ಆ ಚಿತ್ರದ ಹಾಡು “ಸಂದೇಸೆ ಆತೇ ಹೇ” ಹಾಡನ್ನು ಹಾಡಿದ್ದು, ಅದು ದೇಶದ ಜನರ ಮನಸೂರೆಗೊಂಡಿತ್ತು. ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೊ ವೈರಲ್ ಆಗಿದ್ದು, 50,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 4,000 ಲೈಕ್‌ಗಳು ಬಂದಿದ್ದವು.
ಮೂಲ ಹಾಡನ್ನು ಸೋನು ನಿಗಮ್ ಮತ್ತು ರೂಪ್‌ಕುಮಾರ್ ರಾಥೋಡ್ ಹಾಡಿದ್ದಾರೆ. ಇಬ್ಬರು ಜನಪ್ರಿಯ ಲಡಾಖಿ ಜಾನಪದ ಕಲಾವಿದರಾದ ಪದ್ಮಾ ಡೋಲ್ಕರ್ ಮತ್ತು ಸ್ಟಾಂಜಿನ್ ನಾರ್ಗೈಸ್ ಸಂದೇಸೆ ಆತೇ ಹೈ ಹಾಡನ್ನು ಭಾರತೀಯ ಸೈನಿಕರ ಗೌರವಾರ್ಥವಾಗಿ ಕಳೆದ ವರ್ಷ ಸೇನಾ ದಿನದಂದು ಹಾಡಿದ್ದು, ವಿಶೇಷವಾಗಿ ಚಿತ್ರೀಕರಿಸಲಾಗಿದೆ.
ಲಡಾಖ್‌ನಲ್ಲಿರುವ ಪರ್ವತಗಳ ರಮಣೀಯ ದೃಶ್ಯದ ಮುಂದೆ ಸ್ಟಾಂಜಿನ್ ನಾರ್ಗೈಸ್ ಗಿಟಾರ್ ನುಡಿಸುತ್ತಾ ಹಾಡುವುದರೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ನಂತರ ಸಂಗೀತಗಾರ ಪದ್ಮಾ ಡೋಲ್ಕರ್ ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಸುಂದರವಾಗಿ ಕಾಣುತ್ತಾರೆ. ಈ ಹಳೆ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ.