alex Certify ಕರ್ನಾಟಕ, ಕೇರಳ, ತಮಿಳುನಾಡು ಅರಣ್ಯ ಗಡಿಯಲ್ಲಿ ಆನೆಗಳ ಗಣತಿ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕ, ಕೇರಳ, ತಮಿಳುನಾಡು ಅರಣ್ಯ ಗಡಿಯಲ್ಲಿ ಆನೆಗಳ ಗಣತಿ ಆರಂಭ

ಬೆಂಗಳೂರು: ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳ ಗಡಿ ಭಾಗದಲ್ಲಿರುವ ಆನೆಗಳ ಸಂಖ್ಯೆ ಬಗ್ಗೆ ನಿಖರ ಮಾಹಿತಿ ತಿಳಿಯಲು ಗಣತಿ ಆರಂಭಿಸಲಾಗಿದೆ.

ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಅಂತರ ರಾಜ್ಯ ಸಮನ್ವಯ ಸಮಿತಿಯ ಉಸ್ತುವಾರಿಯಲ್ಲಿ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಗುರುವಾರದಿಂದ ಆನೆಗಣತಿ ಆರಂಭಿಸಲಾಗಿದೆ. ಇತ್ತೀಚೆಗೆ ಮಾನವ -ಆನೆ ಸಂಘರ್ಷ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ತಡೆಯಲು, ಸಂಘರ್ಷ ನಿರ್ವಹಣಾ ತಂತ್ರಗಳನ್ನು ರೂಪಿಸಲು ಅಂತರ ರಾಜ್ಯ ಸಮನ್ವಯ ಸಮಿತಿ ಕ್ರಮ ಕೈಗೊಳ್ಳುತ್ತಿದ್ದು, ಇದರ ಭಾಗವಾಗಿ ನೀಲಗಿರಿ ಪರ್ವತ ಶ್ರೇಣಿ ವ್ಯಾಪ್ತಿಯ 10 ಅರಣ್ಯ ವಿಭಾಗಗಳ ವ್ಯಾಪ್ತಿಯಲ್ಲಿ ಆರನೇಗಳ ಗಣತಿ ಆರಂಭಿಸಲಾಗಿದೆ.

ಮೂರು ದಿನಗಳ ಕಾಲ ಗಣತಿ ನಡೆಯಲಿದ್ದು, ಮೂರು ವಿಭಾಗಗಳಲ್ಲಿ ಈ ಕಾರ್ಯ ನಡೆಸಲಾಗುತ್ತದೆ. 1689 ಸಿಬ್ಬಂದಿ, ಅಧಿಕಾರಿ ಮತ್ತು ತಜ್ಞರನ್ನು ಗಣತಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಗಣತಿಯ ಮೊದಲ ದಿನ ಗುರುವಾರ ಡೈರೆಕ್ಟ್ ಕೌಂಟ್ ವಿಧಾನ ಅನುಸರಿಸಲಾಗಿದೆ. 2023ರಲ್ಲಿ ನಡೆಸಿದ ಆನೆಗಣತಿಯಲ್ಲಿನ ಮಾಹಿತಿಯಂತೆ ಆನೆಗಳ ಇರುವಿಕೆಯನ್ನು ಬೀಟ್ ಮೂಲಕ ಲೆಕ್ಕ ಹಾಕಲಾಗಿದ್ದು, ಆನೆಗಳು ಇರುವ ಕಡೆ ಸಸ್ಯವರ್ಗ, ಎತ್ತರದ ಶ್ರೇಣಿ, ಮಳೆ ಮಾದರಿ ವಿವರ ಪಡೆದುಕೊಳ್ಳಲಾಗಿದೆ. ಎರಡನೇ ದಿನವಾದ ಶುಕ್ರವಾರ ಲೈನ್ ಟ್ರಾನ್ಸೆಕ್ಟ್ಸ್ ಕಾರ್ಯ ಮಾಡಲಾಗುವುದು. ಮೂರನೇ ದಿನ ಫೋಟೋ ಪುರಾವೆಗಳೊಂದಿಗೆ ಆನೆಗಳು ಬಳಸುವ ನೀರಿನ ಮೂಲ, ಆನೆಗಳ ಹಿಂಡು, ಗಾತ್ರ, ವಯಸ್ಸು ಮೊದಲಾದ ಮಾಹಿತಿ ಸಂಗ್ರಹಿಸಿ ವೈಜ್ಞಾನಿಕ ಮಾದರಿಯಲ್ಲಿ ವಿಶ್ಲೇಷಿಸಲಾಗುವುದು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...