ಇದು ಹಿಂದಿ ಹೇರಿಕೆ ವಿಷಯವಲ್ಲ, ಬದಲಿಗೆ ಅನ್ಯ ದೇಶದ ತಾಯಿಯೊಬ್ಬಳು ತನ್ನ ಮಗನಿಗೆ ಹಿಂದಿ ಹೇಳಿಕೊಟ್ಟು ಸುದ್ದಿಯಾಗಿರುವ ವಿಚಾರ.
ಕೊರಿಯಾದ ತಾಯಿ- ಮಗ ಜೋಡಿ ದೇಸಿ ನೆಟ್ಟಿಗರ ಹೃದಯ ಗೆಲ್ಲುತ್ತಿದೆ. ತಾಯಿತು ಕೊರಿಯನ್ ಮಹಿಳೆಯಾಗಿದ್ದು, ಅವರು ಭಾರತೀಯ ವ್ಯಕ್ತಿಯ ಪತ್ನಿ. ತಮ್ಮ ಮಗನೊಂದಿಗೆ ದಕ್ಷಿಣ ಕೊರಿಯಾದಲ್ಲಿ ವಾಸಿಸುತ್ತಿದ್ದಾರೆ.
‘ಪ್ರೇಮ್ ಕಿಮ್ ಫಾರ್ ಎವರ್’ ಎಂಬ ಜಾಲತಾಣದ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಕೊರಿಯನ್ ಮಹಿಳೆ ಪಕೋಡಾ ತಯಾರಿಸುವುದನ್ನು ಕಾಣಬಹುದು ಮತ್ತು ಹಿಂದಿಯಲ್ಲಿ ಆ ತಿನಿಸಿನ ಹೆಸರನ್ನು ಸರಿಯಾಗಿ ಹೇಳುವುದು ಹೇಗೆ ಎಂದು ತನ್ನ ಮಗನಿಗೆ ಕಲಿಸುತ್ತಿದ್ದದ್ದು ನೋಡಬಹುದಾಗಿದೆ.
ಮೊದಲ ರೀಲ್ ಮಹಿಳೆ ತನ್ನ ಅಡುಗೆಮನೆಯಲ್ಲಿ ಕೆಲವು ಪಕೋಡಾವನ್ನು ಸಂತೋಷದಿಂದ ಕರಿಯುವುದನ್ನು ತೋರಿಸುತ್ತದೆ. ಅರಿಜಿತ್ ಸಿಂಗ್ ಅವರ ಟ್ರೆಂಡಿಂಗ್ ಹಾಡು ಅಟಕ್ ಗಯಾ ವಿಡಿಯೊದಲ್ಲಿ ಪ್ಲೇ ಆಗುತ್ತಿದೆ.
ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ದೇಸಿ ನೆಟ್ಟಿಗರು ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ. ಮತ್ತೊಂದು ರೀಲ್ನಲ್ಲಿ, ಕೊರಿಯನ್ ತಾಯಿಯು ತನ್ನ ಮಗನಿಗೆ ಪಕೋಡಾ ಪದ ಪ್ರಯೋಗ ಹೇಗೆ ಹೇಳಬೇಕೆಂದು ಕಲಿಸುವುದನ್ನು ಕಾಣಬಹುದು.
“ಯೇ ಪಕೋಡಾ ಹೈ (ಇದು ಪಕೋಡಾ)” ಎಂದು ಆ ತಾಯಿ ಚಿಕ್ಕ ಹುಡುಗನಿಗೆ ಕಲಿಸುತ್ತಾಳೆ. ತಾಯಿ -ಮಗ ಇಬ್ಬರು ಒಂದೆರೆಡು ಬಾರಿ ಪುನರುಚ್ಚರಿಸುವುದು ಕೇಳಿಸುತ್ತದೆ. “ಪಕೋಡಾ ಬಹುತ್ ಸ್ವಾದ್ ಹೈ (ಪಕೋಡಗಳು ತುಂಬಾ ರುಚಿಕರವಾಗಿವೆ)’ ಎಂದು ಸಹ ಕಲಿಸುತ್ತಾಳೆ.