alex Certify ವ್ಯಕ್ತಿ ಸಹಾಯಕ್ಕೆ ಧಾವಿಸಿ ಬಂದ ಪುಟಾಣಿಗಳು; ಮಕ್ಕಳ ಸಹಾಯ ಮನೋಭಾವಕ್ಕೆ ಫಿದಾ ಆದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿ ಸಹಾಯಕ್ಕೆ ಧಾವಿಸಿ ಬಂದ ಪುಟಾಣಿಗಳು; ಮಕ್ಕಳ ಸಹಾಯ ಮನೋಭಾವಕ್ಕೆ ಫಿದಾ ಆದ ನೆಟ್ಟಿಗರು

ಸೋಶಿಯಲ್ ಮೀಡಿಯಾದಲ್ಲಿ ಪ್ರತಿ ನಿತ್ಯ, ಚಿತ್ರ-ವಿಚಿತ್ರ ವಿಡಿಯೋ ಅಪ್ಲೋಡ್ ಆಗ್ತಾನೇ ಇರುತ್ತೆ. ಇನ್ನು ಕೆಲವೊಮ್ಮೆ ಮನಸ್ಸಿಗೆ ಮುದ ನೀಡುವಂತಹ ವಿಡಿಯೋ ಸಹ ಅಪ್ಲೋಡ್ ಆಗ್ತಾ ಇರುತ್ತೆ. ಅಂತಹ ಮನಸ್ಸಿಗೆ ಖುಷಿ ಕೊಡುವ ಹಾಗೆಯೇ, ಹುಬ್ಬೇರಿಸೋ ಹಾಗೆ ಮಾಡೋ ವಿಡಿಯೋ ಇತ್ತೀಚೆಗೆ ವೈರಲ್ ಆಗ್ತಿದೆ.

@DannyDeraney ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಇತ್ತೀಚೆಗೆ ಅಪ್ಲೋಡ್ ಆಗಿದೆ. ವ್ಯಕ್ತಿಯೊಬ್ಬ ಶಾಪಿಂಗ್ ಟ್ರಾಲಿ ಹಿಡಿದುಕೊಂಡು ಹೋಗ್ತಿರೋ 51 ಸೆಕೆಂಡ್ ನ ಕ್ಲಿಪ್ ಇದು. ಅದೇ ವೇಳೆಯಲ್ಲಿ, ಬ್ಯಾಲೆನ್ಸ್ ತಪ್ಪಿ ಟ್ರಾಲಿ ಅಡ್ಡ ಬಿದ್ದುಬಿಡುತ್ತೆ. ಆಗ ಟ್ರಾಲಿಯಲ್ಲಿದ್ದ ಹಣ್ಣುಗಳೆಲ್ಲಾ ಕೆಳಗೆ ಹರಡಿ ಬಿದ್ದು ಬಿಡುತ್ತೆ. ಇದನ್ನು ಅಲ್ಲೇ ಇದ್ದ ಮಕ್ಕಳು ನೋಡುತ್ತಾರೆ. ಆ ವೇಳೆ, ಅರೆಕ್ಷಣವೂ ಯೋಚನೆಯೂ ಮಾಡದೆ, ಪುಟಾಣಿಗಳು ಓಡೋಡಿ ಬಂದು ಆ ವ್ಯಕ್ತಿಗೆ ಸಹಾಯ ಮಾಡುತ್ತಾರೆ.

ಪುಟ್ ಪುಟಾಣಿಗಳು ಬಿದ್ದ ಹಣ್ಣುಗಳನ್ನೆಲ್ಲಾ ಒಂದೊಂದಾಗಿ ಹೆಕ್ಕಿ ಆ ವ್ಯಕ್ತಿಗೆ ಆರಿಸಿ ಕೊಡುತ್ತಾರೆ. ಈ ದೃಶ್ಯ ನೋಡೋದೇ ಖುಷಿ. ಈ ವಿಡಿಯೋ ಕ್ಯಾಪ್ಶನ್ನಲ್ಲಿ ಯೋಗ್ಯ ಮನುಷ್ಯರಾಗಲು ತಗುಲುವ ವೆಚ್ಚವು $0.00. ಎಲ್ಲೆಂದರಲ್ಲಿ ಚೆಲ್ಲಿದ ಹಣ್ಣುಗಳನ್ನು ಹೆಕ್ಕಿ ಈ ಮನುಷ್ಯನಿಗೆ ಸಹಾಯ ಮಾಡಲು ಮಕ್ಕಳು ಧಾವಿಸುತ್ತಾರೆ. ಇಂತಹ ವಿಡಿಯೋದಿಂದ ದೊಡ್ಡವರು ಕಲಿಯೋ ಪಾಠ ತುಂಬಾ ಇದೆ ಅಂತ ನೆಟ್ಟಿಗರು ತಮ್ಮ ತಮ್ಮ ಅಭಿಪ್ರಾಯವನ್ನ ಹೇಳಿಕೊಳ್ತಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...