ಕೇರಳದಲ್ಲಿ ನಡೆದ ರಸ್ತೆ ಅಪಘಾತವೊಂದರ ವಿಡಿಯೋ ವೈರಲ್ ಆಗಿದ್ದು, ಪುಟ್ಟ ಬಾಲಕನೊಬ್ಬ ಕೂದಲೆಳೆ ಅಂತರದಲ್ಲಿ ಸಾವಿನಿಂದ ಬಚಾವ್ ಆಗಿರುವ ಸನ್ನಿವೇಶ ವೀಕ್ಷಿಸಿದ ಎಂತವರೂ ಹೌಹಾರುವಂತಿದೆ.
ಮಾರ್ಚ್ 20, ಭಾನುವಾರ ಸಂಜೆ ಕೇರಳದ ಕಣ್ಣೂರಿನ ತಳಿಪರಂಬ ಬಳಿಯ ಚೋರುಕ್ಕಲಾ ಎಂಬಲ್ಲಿ ಈ ಘಟನೆ ನಡೆದಿದೆ. ಆ ಬಾಲಕನ ಪ್ರಾಣಾಪಾಯದಿಂದ ಪಾರಾಗಿರುವುದು ಪವಾಡಕ್ಕಿಂತ ಕಡಿಮೆ ಏನಲ್ಲ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸೇನೆ ಸೇರುವ ಕನಸಿಗೆ ಮತ್ತಷ್ಟು ಬಲ; ಮಧ್ಯರಾತ್ರಿ 10 ಕಿ.ಮೀ. ಓಡುತ್ತಿದ್ದ ಯುವಕನಿಗೆ ಸಿಕ್ಕಿದೆ ಸಹಾಯಹಸ್ತ
ವೇಗವಾಗಿ ಸೈಕಲ್‌ನಲ್ಲಿ ರಸ್ತೆಗೆ ನುಗ್ಗಿದ ಬಾಲಕನಿಗೆ ಮೊದಲು ಮೋಟಾರ್ ಬೈಕ್ ಡಿಕ್ಕಿ ಹೊಡೆದಿದ್ದು, ಒಂದು ಸೆಕೆಂಡ್‌ನಲ್ಲಿ ಅವನ ಸೈಕಲ್ ನುಜ್ಜುಗುಜ್ಜಾಗಿದೆ, ಮೋಟರ್ ಬೈಕ್ ಡಿಕ್ಕಿಯಾಗಿರದೇ ಇದ್ದರೆ ಬಾಲಕ ಬದುಕಿ ಉಳಿಯುವುದು ಅನುಮಾನ ಎಂಬಂತ ಸನ್ನಿವೇಶ ಆ ವಿಡಿಯೋದಲ್ಲಿ ಕಾಣಿಸುತ್ತದೆ.
ಇಡೀ ಘಟನೆಗಳ ಕೆಲವೇ ಸೆಕೆಂಡುಗಳಲ್ಲಿ ನಡೆಯಿತು ಆದರೆ ಅವು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ದೃಶ್ಯಾವಳಿ ಇದೀಗ ವೈರಲ್ ಆಗಿದೆ.
9 ವರ್ಷದ ಬಾಲಕ ತನ್ನ ಸೈಕಲ್‌ನಲ್ಲಿ ರಸ್ತೆ ದಾಟಲು ಪ್ರಯತ್ನಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಆತ ಎಲ್ಲಿಂದಲೋ ವೇಗವಾಗಿ ಬರುತ್ತಿದ್ದಂತೆ, ಅವನ ಬೈಸಿಕಲ್ ನೇರವಾಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಮೋಟಾರ್‌ಬೈಕಿಗೆ ಡಿಕ್ಕಿ ಹೊಡೆದಿದೆ. ನಂತರ ಬಾಲಕನನ್ನು ಗಾಳಿಯಲ್ಲಿ ಹಾರಿ ರಸ್ತೆಯ ಇನ್ನೊಂದು ಬದಿಯಲ್ಲಿ ಎಸೆದಂತೆ ಬಿದ್ದಿದ್ದಾನೆ.
ಅದೃಷ್ಟವಶಾತ್, ಒಂದು ಸೆಕೆಂಡ್ ನಂತರ ಬಾಲಕನ ಬೈಸಿಕಲ್ ಮೇಲೆ ಬಸ್ ಹರಿದಿದೆ. ಅವನು ರಸ್ತೆಯ ಆಚೆ ಬಿದ್ದಿದ್ದರಿಂದ ಅಲ್ಲಿಯೇ ನಿಂತುಕೊಂಡು ನಡೆದದ್ದನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು.
ಹುಡುಗ ಕೆಲವೇ ಸೆಕೆಂಡುಗಳಲ್ಲಿ ಎರಡು ಬಾರಿ ಸಾವನ್ನು ವಂಚಿಸುವಲ್ಲಿ ಯಶಸ್ವಿಯಾಗಿದ್ದಾನೆ ಎಂಬಂತೆ ತೋರುತ್ತದೆ. ಮೊದಲು ಮೋಟಾರ್ ಬೈಕ್ ಅವನ ಸೈಕಲ್‌ಗೆ ಡಿಕ್ಕಿ ಹೊಡೆದಾಗ ಮತ್ತು ಎರಡನೆಯದು ವೇಗದೂತ ಬಸ್ ಅವನ ಸೈಕಲ್ ಮೇಲೆ ಚಲಿಸಿದಾಗ. ಒಟ್ಟಾರೆ ಎದೆ ಝಲ್ ಎನಿಸುವ ಘಟನೆ ಇದು.
https://twitter.com/i/status/1506884004246552588