alex Certify ನೇರ ಪ್ರಸಾರದ ವೇಳೆ ಕಾರು ಗುದ್ದಿದರೂ ಕೂಡಲೇ ಎದ್ದು ನಿಂತು ವರದಿ ಮುಂದುವರೆಸಿದ ದಿಟ್ಟ ಪತ್ರಕರ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೇರ ಪ್ರಸಾರದ ವೇಳೆ ಕಾರು ಗುದ್ದಿದರೂ ಕೂಡಲೇ ಎದ್ದು ನಿಂತು ವರದಿ ಮುಂದುವರೆಸಿದ ದಿಟ್ಟ ಪತ್ರಕರ್ತೆ

ಜಗತ್ತಿನಾದ್ಯಂತ ಜರುಗುವ ಅನೇಕ ಸುದ್ದಿಗಳ ನೇರ ಪ್ರಸಾರ ಮಾಡುವ ವೇಳೆ ಪತ್ರಕರ್ತರು ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ.

ಇಂಥ ಒಂದು ಕ್ಷಣವನ್ನು ವೆಸ್ಟ್ ವರ್ಜೀನಿಯಾ ಟಿವಿಯ ವರದಿಗಾರ್ತಿಯೊಬ್ಬರು ಎದುರಿಸಿದ್ದು, ದಿಟ್ಟತನದಿಂದ ಮೆಟ್ಟಿ ನಿಂತಿದ್ದಾರೆ. ಬುಧವಾರದಂದು ನೇರ ಪ್ರಸಾರದಲ್ಲಿ ಭಾಗಿಯಾಗಿದ್ದ ಈಕೆಗೆ ಕಾರೊಂದು ಲಘುವಾಗಿ ಗುದ್ದಿದರೂ ಸಹ ಕೂಡಲೇ ಮೇಲೆದ್ದ ಈಕೆ ತಮ್ಮ ವರದಿಗಾರಿಕೆಯನ್ನು ಮುಗಿಸಿದ್ದಾರೆ.

Viral Video: ಸಲ್ಮಾನ್ ಖಾನ್ ಹಾಡಿಗೆ ಸ್ಟೆಪ್ ಹಾಕಿ ರಂಜಿಸಿದ ಡಾನ್ಸಿಂಗ್ ಡ್ಯಾಡ್

ಹಿಂಬದಿಯಿಂದ ಈಕೆಗೆ ಗುದ್ದಿದ ಎಸ್‌ಯುವಿ ಆಕೆಯನ್ನು ನೆಲಕ್ಕೆ ಬೀಳಿಸಿದರೂ ಸಹ ಕೂಡಲೇ ಎದ್ದು ನಿಂತ ಈ ವರದಿಗಾರ್ತಿ, “ಓಹ್ ಮೈ ಗಾಡ್‌, ಈಗ ತಾನೇ ಕಾರಿನಿಂದ ಗುದ್ದಲ್ಪಟ್ಟೆ, ಆದರೆ ನಾನು ಓಕೆ ಆಗಿದ್ದೇನೆ, ಟಿಮ್,” ಎಂದು ಸುದ್ದಿ ನಿರೂಪಕ ಟಿಮ್ ಇರ್‌ಗೆ ಹೇಳುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.

ಸುದ್ದಿಯ ನೇರ ಪ್ರಸಾರದ ಜವಾಬ್ದಾರಿಯನ್ನು ಏಕಾಂಗಿಯಾಗಿ ನಿಭಾಯಿಸುತ್ತಿದ್ದ ಯೊರ್ಗೆರ ದಿಟ್ಟತನವನ್ನು ಕೆಲ ನೆಟ್ಟಿಗರು ಕೊಂಡಾಡಿದರೆ, ಮತ್ತೊಂದೆಡೆ, ಪತ್ರಕರ್ತರಿಗೆ ಇಂಥ ಪರಿಸ್ಥಿತಿಗಳನ್ನೆಲ್ಲಾ ಸಹಿಸಿಕೊಂಡು ಹೋಗುವ ಅನಿವಾರ್ಯತೆಗೆ ತಂದಿರುವ ಪತ್ರಿಕೋದ್ಯಮವನ್ನು ಬಯ್ದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...