
ಕೆಲವು ಸಿನಿಮಾ ಹಾಡುಗಳೇ ಹಾಗೆ. ಎಷ್ಟು ಪ್ರಸಿದ್ಧಿ ಪಡೆಯುತ್ತವೆ ಎಂದರೆ ಇದು ವಿದೇಶಗಳಲ್ಲಿಯೂ ಮನೆಮಾತಾಗಿಬಿಡುತ್ತವೆ. ಅರ್ಥ ಗೊತ್ತಿಲ್ಲದಿದ್ದರೂ ಅವುಗಳ ಮ್ಯೂಸಿಕ್ಗೆ ಜನರು ಫಿದಾ ಆಗಿಬಿಡುತ್ತಾರೆ.
ಅಂಥದ್ದೇ ಹಾಡುಗಳಲ್ಲಿ ಒಂದಾಗಿದೆ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರ, ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಭಾರಿ ಹಿಟ್ ಆಗಿರುವ ಈ ಚಿತ್ರದ ಹಾಡುಗಳು ಅಮೆರಿಕದ ನಂತರ ಜಪಾನ್ ಮುಟ್ಟಿದೆ. ಜಪಾನ್ನಲ್ಲಿ ಇದೇ ಅಕ್ಟೋಬರ್ 21 ರಂದು ಬಿಡುಗಡೆಯಾಗಿರುವ ಚಿತ್ರದ ಮ್ಯೂಸಿಕ್ಗೆ ಜನರು ಫಿದಾ ಆಗಿದ್ದಾರೆ.
ಚಿತ್ರದ ಹಿಟ್ ಹಾಡುಗಳಲ್ಲಿ ಒಂದಾಗಿರುವ ‘ನಾಟು ನಾಟು’ ಈಗಾಗಲೇ ಜನರ ಮನಸ್ಸನ್ನು ಗೆದ್ದಿದೆ. ಜನಪ್ರಿಯ ಜಪಾನಿನ ಯೂಟ್ಯೂಬರ್ ಮೇಯೊ ಹಾಗೂ ಅವರ ಸ್ನೇಹಿತ ಈ ಹಾಡಿಗೆ ರಸ್ತೆಯ ನಡುವೆಯೇ ಹೆಜ್ಜೆ ಹಾಕಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಈ ಚಿತ್ರ ನೋಡಿ ಬಹಳ ಸಂತೋಷವಾಯಿತು. ಇದರ ಹಾಡು ನಾಟು ನಾಟು, ಅದನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಇದಕ್ಕಾಗಿಯೇ ಹೆಜ್ಜೆ ಹಾಕೋಣ ಎನ್ನಿಸಿತು ಎಂದಿರುವ ಈ ಜೋಡಿಯ ವಿಡಿಯೋಗೆ ಸಹಸ್ರಾರು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.