alex Certify ಜಮ್ಮು-ಕಾಶ್ಮೀರ ಪೊಲೀಸ್ ಮ್ಯಾನ್ ʼರ್ಯಾಪ್ ಸಾಂಗ್ʼ ಗೆ ನೆಟ್ಟಿಗರು ಫುಲ್ ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಮ್ಮು-ಕಾಶ್ಮೀರ ಪೊಲೀಸ್ ಮ್ಯಾನ್ ʼರ್ಯಾಪ್ ಸಾಂಗ್ʼ ಗೆ ನೆಟ್ಟಿಗರು ಫುಲ್ ಫಿದಾ

ಗಲ್ಲಿಬಾಯ್, ರಣಬೀರ್ ಸಿಂಗ್ ಸೂಪರ್ ಡೂಪರ್ ಹಿಟ್ ಸಿನೆಮಾ ಲಿಸ್ಟ್‌ಲ್ಲಿ ಇದು ಕೂಡಾ ಒಂದು. ಯುವ ಜನರಲ್ಲಿ ಹೊಸ ಸಂಚಲನ ಹುಟ್ಟಿಸಿದ್ದ ಸಿನೆಮಾ. ಈ ಸಿನೆಮಾದಿಂದಲೇ ರ್ಯಾಪ್ ಹಾಡುಗಳು ಇನ್ನಷ್ಟು ಜನಪ್ರಿಯವಾಗಿದ್ದವು. ಇನ್ನು ಈ ಸಿನೆಮಾದ ’ಅಪ್ನಾ ಟೈಂ ಆಯೆಗಾ’ ಹಾಡಂತೂ ಕೇಳಿ ಕೇಳಿಯೇ ಅದೆಷ್ಟೋ ಯುವಕರು ರ್ಯಾಪ್ ಸಿಂಗರ್ ಆಗಿದ್ದೂ ನಿಜ.

ಇತ್ತಿಚೆಗಂತೂ ಸೊಶಿಯಲ್ ಮಿಡಿಯಾದಲ್ಲಿ ರ್ಯಾಪ್ ಹಾಡುಗಳದ್ದೇ ಅಬ್ಬರ ಹೆಚ್ಚು. ಈಗ ಇದೇ ಮಿಡಿಯಾಲೋಕದಲ್ಲಿ ಕಾಶ್ಮಿರದ ರ್ಯಾಪ್ ಸಿಂಗರ್ ಹಾಡು ಫುಲ್ ವೈರಲ್ ಆಗಿದೆ. ರ್ಯಾಪ್ ಸಿಂಗರ್ನ ಈ ಹಾಡಿನ ವಿಡಿಯೋ ನೋಡ್ತಿದ್ರೆ ಎಂಥವರೂ ಕೂಡಾ ದಂಗಾಗುವ ಹಾಗಿದೆ. ಯಾಕಂದ್ರೆ ಹಾಡ್ತಿರೋದು ಯಾವುದೋ ಕಾಲೇಜ್ ಹುಡುಗ ಅಲ್ಲ. ಬದಲಾಗಿ ಯುನಿಫಾರ್ಮ್ ಹಾಕಿರೋ ಪೊಲೀಸ್ ಮ್ಯಾನ್‌.

ಈ ರ್ಯಾಪ್ ಹಾಡಿನಲ್ಲಿ ಆತನ ಜೀವನದ ಸಂಘರ್ಷ, ಆತ ಕಷ್ಟಪಟ್ಟ ರೀತಿ, ಸವಾಲುಗಳನ್ನ ಎದುರಿಸಿದ್ದ ರೀತಿಯನ್ನ ರ್ಯಾಪ್ ಶೈಲಿಯಲ್ಲಿ ಹಾಡಿರೋದು ವಿಶೇಷ. ಅದರಲ್ಲೂ ಬೀಟ್ ಗೆ ತಕ್ಕಂತೆ ಹಾಡ್ತಿರೋದನ್ನ ಕೇಳೋದೇ ಒಂದು ಖುಷಿ ಕೊಡುತ್ತೆ. ನೆಟ್ಟಿಗರು ಈ ಪೊಲೀಸ್ ಮ್ಯಾನ್‌. ಹಾಗೂ ಆತ ಹಾಡುವ ಪರಿಗೆ ಭೇಷ್ ಅಂತ ಹೇಳಿದ್ಧಾರೆ. ಅಷ್ಟೆ ಅಲ್ಲ ರ್ಯಾಪ್ ಶೈಲಿಯಲ್ಲೇ ಕಷ್ಟದ ಸಮಯಕ್ಕೂ ಅಂತ್ಯ ಇದೆ ಅಂತಾನೂ ಹೇಳಿ, ಧೈರ್ಯ ಕಳೆದುಕೊಳ್ಳದಿರಲು ಸಲಹೆಯನ್ನೂ ಕೊಟ್ಟಿದ್ಧಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...