alex Certify ಆಪಲ್ ಪಕೋಡಾ ತಯಾರಿಸಿದ ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್…! ಟೇಸ್ಟ್ ಹೇಗಿದೆ ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪಲ್ ಪಕೋಡಾ ತಯಾರಿಸಿದ ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್…! ಟೇಸ್ಟ್ ಹೇಗಿದೆ ಗೊತ್ತಾ..?

Viral Video: Instagram Influencer Makes Apple Pakodas, Internet Left Baffled | Watchಇತ್ತೀಚಿನ ದಿನಗಳಲ್ಲಿ  ವಿಲಕ್ಷಣವಾದ ಆಹಾರ ಸಂಯೋಜನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕೆಲವರು ನಮ್ಮ ನೆಚ್ಚಿನ ಭಕ್ಷ್ಯಗಳನ್ನು ಗೊಂದಲಗೊಳಿಸುತ್ತಾರೆ. ಈ ಸಮ್ಮಿಳನ ಭಕ್ಷ್ಯಗಳಲ್ಲಿ ಕೆಲವು ಪ್ರಯತ್ನಿಸಲು ಯೋಗ್ಯವಾಗಿದ್ದರೆ, ಇನ್ನೂ ಕೆಲವು ನೆಟ್ಟಿಗರಲ್ಲಿ ಕೋಪ ತರಿಸುತ್ತದೆ. ಇದೀಗ, ವಿಲಕ್ಷಣ ಆಹಾರಗಳ ಪಟ್ಟಿಗೆ ಆಪಲ್ ಪಕೋಡ ಸೇರ್ಪಡೆಗೊಂಡಿದೆ.

ಹೌದು, ನಾವು ತಮಾಷೆ ಮಾಡುತ್ತಿಲ್ಲ..! ಸಾಮಾನ್ಯವಾಗಿ ಬಹುತೇಕ ಮಂದಿ ಪಕೋಡವನ್ನು ಬಹಳ ಇಷ್ಟಪಡುತ್ತಾರೆ. ಆದರೆ ಸೇಬು ಪಕೋಡಾ ಮಾಡುವುದನ್ನು ಎಂದಾದ್ರೂ ನೋಡಿದ್ದೀರಾ..? ಇದೀಗ, ಈ ಸೇಬು ಪಕೋಡ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅತ್ಯಾಚಾರ ಘೋರ ಅಪರಾಧ, ಸಮರ್ಥನೀಯವಲ್ಲ: ರೇಪ್ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಖಂಡನೆ

ವಿಡಿಯೋದಲ್ಲಿ,  ಇನ್ಸ್ಟಾಗ್ರಾಂ ಇನ್‌ಫ್ಲುಯೆನ್ಸರ್ ಇಡಿಯಾದ ಸೇಬನ್ನು ಪಕೋಡಾ ಹಿಟ್ಟಿಗೆ ಅದ್ದಿ, ಕಾದ ಎಣ್ಣೆಯಲ್ಲಿ ಹುರಿದಿದ್ದಾನೆ. ಎಣ್ಣೆಯಲ್ಲಿ ಚೆನ್ನಾಗಿ ಕರಿದ ನಂತರ ಅದನ್ನು ತಿನ್ನುತ್ತಾ, ಟೇಸ್ಟ್ ಬಹಳ ಚೆನ್ನಾಗಿದೆ ಎಂದು ಹೇಳಿದ್ದಾನೆ.

ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೊದಲ್ಲಿ, ಫುಡ್  ವ್ಲಾಗರ್ ಸೇಬನ್ನು ಕರಿದ ನಂತರ ಅದನ್ನು ಅರ್ಧದಷ್ಟು ಕತ್ತರಿಸಿ ತಿಂದಿದ್ದು, ಚೆನ್ನಾಗಿದೆ ಎಂದಿದ್ದಾರೆ. ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರಿಗೆ ಇಷ್ಟವಾಗಿದ್ದು, ಇನ್ನೂ ಕೆಲವರಿಗೆ ಇಷ್ಟವಾದಂತೆ ತೋರಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...