alex Certify ವಿಶ್ವಕಪ್​ ಗೆದ್ದ ಭಾರತದ ವನಿತೆಯರು: ಕಾಲಾ ಚಸ್ಮಾ ಹಾಡಿಗೆ ಭರ್ಜರಿ ನರ್ತಿಸಿದ ಕ್ರಿಕೆಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವಕಪ್​ ಗೆದ್ದ ಭಾರತದ ವನಿತೆಯರು: ಕಾಲಾ ಚಸ್ಮಾ ಹಾಡಿಗೆ ಭರ್ಜರಿ ನರ್ತಿಸಿದ ಕ್ರಿಕೆಟಿಗರು

ನವದೆಹಲಿ: ಮಹಿಳಾ ಅಂಡರ್-19 ಟಿ20 ವಿಶ್ವಕಪ್​ ಅನ್ನು ಭಾರತದ ವನಿತೆಯರು ಗೆದ್ದಿದ್ದು, ಇದೀಗ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶೆಫಾಲಿ ವರ್ಮಾ ನೇತೃತ್ವದ ಟಿ20 ತಂಡ 7 ವಿಕೆಟ್ ಅಂತರದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಚೊಚ್ಚಲ ಮಹಿಳೆಯರ ಅಂಡರ್ 19 ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದಿದೆ.

ಇದಾಗಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಇಡೀ ತಂಡಕ್ಕೆ 5 ಕೋಟಿ ರೂ ಬಹುಮಾನ ಘೋಷಣೆ ಮಾಡಿದೆ. ಮಹಿಳೆಯರಿಗೆ ಶ್ಲಾಘನೆ ವ್ಯಕ್ತಪಡಿಸಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸರಣಿ ಟ್ವೀಟ್ ಮಾಡಿದ್ದಾರೆ. ‘ಭಾರತದಲ್ಲಿ ಮಹಿಳಾ ಕ್ರಿಕೆಟ್ ಏರುಗತಿಯಲ್ಲಿದೆ. ವಿಶ್ವಕಪ್ ವಿಜಯೋತ್ಸವವು ಮಹಿಳಾ ಕ್ರಿಕೆಟ್‌ನ ಸ್ಥಾನಮಾನವನ್ನು ಹಲವಾರು ಹಂತಗಳಲ್ಲಿ ಏರಿಸಿದೆ. ಪ್ರಶಸ್ತಿ ಗೆದ್ದ ತಂಡಕ್ಕೆ ಬಹುಮಾನದ ಮೊತ್ತವಾಗಿ ಇಡೀ ತಂಡ ಮತ್ತು ಸಹಾಯಕ ಸಿಬ್ಬಂದಿಗೆ 5 ಕೋಟಿ ರೂಪಾಯಿಯನ್ನು ಘೋಷಿಸಲು ನನಗೆ ಸಂತೋಷವಾಗಿದೆ ಎಂದಿದ್ದಾರೆ.

2005 ರಲ್ಲಿ 50-ಓವರ್ ಪಂದ್ಯಾವಳಿಯ ಮೂಲಕ ಭಾರತವು ಮೊದಲ ಬಾರಿಗೆ ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿದ ಸುಮಾರು 18 ವರ್ಷಗಳ ನಂತರ, ಶಫಾಲಿ ವರ್ಮಾ ಮತ್ತು ಕೋ ಅಮೋಘ ಬೌಲಿಂಗ್ ಪ್ರದರ್ಶನವನ್ನು ನೀಡಿದರು ಮತ್ತು ಕೆಲವು ಅತ್ಯುತ್ತಮ ಫೀಲ್ಡಿಂಗ್‌ನೊಂದಿಗೆ ಇಂಗ್ಲೆಂಡ್ ಅನ್ನು ಕೇವಲ 68 ರನ್‌ಗಳಿಗೆ ಔಟ್ ಮಾಡಿದರು. ಮತ್ತು ಪಂದ್ಯದ ನಂತರ, ಭಾರತೀಯ ವನಿತೆಯರು ಜನಪ್ರಿಯ ಬಾಲಿವುಡ್ ಹಾಡು ‘ಕಾಲಾ ಚಸ್ಮಾ’ ಗೆ ನರ್ತಿಸಿದ್ದಾರೆ. ಈ ವಿಡಿಯೋ ಈಗ ಭಾರಿ ವೈರಲ್​ ಆಗಿದೆ. ಏತನ್ಮಧ್ಯೆ, ರಾಷ್ಟ್ರೀಯ ಪುರುಷರ ತಂಡ ಐತಿಹಾಸಿಕ ಪ್ರಶಸ್ತಿ ಗೆಲುವಿಗಾಗಿ ಅವರನ್ನು ಅಭಿನಂದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...