alex Certify ಸರಣಿ ಸ್ವೀಪ್​ ಮಾಡಿದ ಖುಷಿಯಲ್ಲಿ ಕಾಲಾ ಚಶ್ಮಾಗೆ ಸ್ಟೆಪ್​ ಹಾಕಿದ ಕ್ರಿಕೆಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರಣಿ ಸ್ವೀಪ್​ ಮಾಡಿದ ಖುಷಿಯಲ್ಲಿ ಕಾಲಾ ಚಶ್ಮಾಗೆ ಸ್ಟೆಪ್​ ಹಾಕಿದ ಕ್ರಿಕೆಟಿಗರು

ಜಿಂಬಾಬ್ವೆ ವಿರುದ್ಧ ಕ್ರಿಕೆಟ್​ ಸರಣಿಯಲ್ಲಿ ಕ್ಲೀನ್​ ಸ್ವೀಪ್​ ಮಾಡಿದ ಭಾರತ ತಂಡದ ಆಟಗಾರರು ಕುಣಿದು ಸಂಭ್ರಮಿಸಿದ್ದಾರೆ.

3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡ ಬಳಿಕ ಡ್ರೆಸ್ಸಿಂಗ್​ ರೂಂನಲ್ಲಿ ಸಂಭ್ರಮಾಚರಣೆ ಜೋರಾಗಿ ನಡೆದಿತ್ತು. ತಂಡದ ಕ್ಯಾಪ್ಟನ್​ ಕೆ.ಎಲ್​.ರಾಹುಲ್​ ಆರಂಭದಲ್ಲಿ ಕಾಣಿಸಿಕೊಂಡು ಬದಿಗೆ ಸರಿದು ನಿಂತು ಪ್ರೋತ್ಸಾಹಿಸುವ ಹಾಗೂ ಉಳಿದ ಆಟಗಾರರು ಕಾಲಾ ಚಶ್ಮಾ ಹಾಡಿಗೆ ಸ್ಟೆಪ್​ ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದು.

ಧವನ್​, ಶುಬ್​ ಮನ್​ ಗಿಲ್​, ಇಶಾಂತ್​ ಕಿಶನ್​, ಕುಲದೀಪ್​, ದೀಪಕ್​ ಚಹಾರ್​ ಸೇರಿ ಬಹುತೇಕ ಆಟಗಾರರು ಹಾಡಿನ ರಿದಂಗೆ ತಕ್ಕಂತೆ ಕುಣಿಯುವುದು ಅಭಿಮಾನಿಗಳನ್ನೂ ಸಹ ಖುಷಿಪಡಿಸಿದೆ.

‘ಬಾರ್​ ಬಾರ್​ ದೇಖೋ’ ಚಿತ್ರದ ಜನಪ್ರಿಯ ಪಂಜಾಬ್​ ಪಾಪ್​ ಸಂಖ್ಯೆ ‘ಕಾಲಾ ಚಶ್ಮಾ’ ಹಾಡಿಗೆ ತಂಡವು ತಮ್ಮ ಸೂಪರ್​ ಫನ್​ ಸೆೈಡ್​ ಅನ್ನು ಬಹಿರಂಗಪಡಿಸಿತು.

ಈ ವೀಡಿಯೊವನ್ನು ಶಿಖರ್​ ಧವನ್​ ಮತ್ತು ಶುಭಮನ್​ ಗಿಲ್​ ಸೇರಿದಂತೆ ಹಲವು ಕ್ರಿಕೆಟಿಗರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, “ನಾವು ಗೆಲುವನ್ನು ಹೀಗೆ ಆಚರಿಸುತ್ತೇವೆ” ಎಂಬ ಶೀರ್ಷಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್​ ಅಭಿಮಾನಿಗಳ ಈ ಡ್ಯಾನ್ಸ್​ ನೋಡಿ ಥ್ರಿಲ್​ ಆಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸರಣಿಯ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ 13 ರನ್​ಗಳಿಂದ ಸೋಲುಂಡಿತು. ಮೂರು ಪಂದ್ಯಗಳಲ್ಲಿ ಒಟ್ಟು 245 ರನ್​ಗಳನ್ನು ಕೊಡುಗೆಯಾಗಿ ನೀಡಿದ ಗಿಲ್​ ಪಂದ್ಯದ ಆಟಗಾರ ಮತ್ತು ಸರಣಿಯ ಆಟಗಾರ ಪ್ರಶಸ್ತಿ ಪಡೆದುಕೊಂಡರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...