ಜಿಂಬಾಬ್ವೆ ವಿರುದ್ಧ ಕ್ರಿಕೆಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ಭಾರತ ತಂಡದ ಆಟಗಾರರು ಕುಣಿದು ಸಂಭ್ರಮಿಸಿದ್ದಾರೆ.
3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮಾಚರಣೆ ಜೋರಾಗಿ ನಡೆದಿತ್ತು. ತಂಡದ ಕ್ಯಾಪ್ಟನ್ ಕೆ.ಎಲ್.ರಾಹುಲ್ ಆರಂಭದಲ್ಲಿ ಕಾಣಿಸಿಕೊಂಡು ಬದಿಗೆ ಸರಿದು ನಿಂತು ಪ್ರೋತ್ಸಾಹಿಸುವ ಹಾಗೂ ಉಳಿದ ಆಟಗಾರರು ಕಾಲಾ ಚಶ್ಮಾ ಹಾಡಿಗೆ ಸ್ಟೆಪ್ ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದು.
ಧವನ್, ಶುಬ್ ಮನ್ ಗಿಲ್, ಇಶಾಂತ್ ಕಿಶನ್, ಕುಲದೀಪ್, ದೀಪಕ್ ಚಹಾರ್ ಸೇರಿ ಬಹುತೇಕ ಆಟಗಾರರು ಹಾಡಿನ ರಿದಂಗೆ ತಕ್ಕಂತೆ ಕುಣಿಯುವುದು ಅಭಿಮಾನಿಗಳನ್ನೂ ಸಹ ಖುಷಿಪಡಿಸಿದೆ.
‘ಬಾರ್ ಬಾರ್ ದೇಖೋ’ ಚಿತ್ರದ ಜನಪ್ರಿಯ ಪಂಜಾಬ್ ಪಾಪ್ ಸಂಖ್ಯೆ ‘ಕಾಲಾ ಚಶ್ಮಾ’ ಹಾಡಿಗೆ ತಂಡವು ತಮ್ಮ ಸೂಪರ್ ಫನ್ ಸೆೈಡ್ ಅನ್ನು ಬಹಿರಂಗಪಡಿಸಿತು.
ಈ ವೀಡಿಯೊವನ್ನು ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಸೇರಿದಂತೆ ಹಲವು ಕ್ರಿಕೆಟಿಗರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, “ನಾವು ಗೆಲುವನ್ನು ಹೀಗೆ ಆಚರಿಸುತ್ತೇವೆ” ಎಂಬ ಶೀರ್ಷಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳ ಈ ಡ್ಯಾನ್ಸ್ ನೋಡಿ ಥ್ರಿಲ್ ಆಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸರಣಿಯ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ 13 ರನ್ಗಳಿಂದ ಸೋಲುಂಡಿತು. ಮೂರು ಪಂದ್ಯಗಳಲ್ಲಿ ಒಟ್ಟು 245 ರನ್ಗಳನ್ನು ಕೊಡುಗೆಯಾಗಿ ನೀಡಿದ ಗಿಲ್ ಪಂದ್ಯದ ಆಟಗಾರ ಮತ್ತು ಸರಣಿಯ ಆಟಗಾರ ಪ್ರಶಸ್ತಿ ಪಡೆದುಕೊಂಡರು.