ಹಾವು ಎಂದಾಕ್ಷಣ ಮನಸ್ಸಿಗೆ ಮೊದಲು ಬರುವುದು ಭಯ! ನಾವು ಹಾವನ್ನು ಗುರುತಿಸಿದ ಕೂಡಲೇ ಸ್ವಯಂಚಾಲಿತವಾಗಿ ಭಯಗೊಳ್ಳುತ್ತೇವೆ. ಹಾವುಗಳು ಅನೇಕ ಜನರ ಪಾಲಿನ ಅತ್ಯಂತ ಕೆಟ್ಟ ಭಯವಾಗಿದ್ದು ಮತ್ತು ಅವುಗಳನ್ನು ಎದುರಿಸುವುದು ಒಂದು ದೊಡ್ಡ ದುಃಸ್ವಪ್ನ.
ಅದಕ್ಕಾಗಿಯೇ ಸ್ನೇಕ್ ಪ್ರಾಂಕ್ ವಿಡಿಯೋಗಳು ಅಂತರ್ಜಾಲದಲ್ಲಿ ಭಾರೀ ಹಿಟ್ ಆಗಿವೆ. ಇಂಥದ್ದೊಂದು ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದ್ದು, ಪತಿಯೊಬ್ಬ ತನ್ನ ಹೆಂಡತಿಯನ್ನು ನಕಲಿ ಹಾವಿನೊಂದಿಗೆ ತಮಾಷೆ ಮಾಡುತ್ತಿರುವುದನ್ನು ನೋಡಬಹುದಾಗಿದೆ.
ಕೊರೊನಾ ನೆಪದಲ್ಲಿ ಶಾಲೆಗಳ ಬಾಗಿಲು ಮುಚ್ಚುವ ಅಗತ್ಯವೇ ಇಲ್ಲ: ವಿಶ್ವಬ್ಯಾಂಕ್ ನಿರ್ದೇಶಕರ ಸ್ಪಷ್ಟ ನುಡಿ
ಪತಿ ಸಣ್ಣದೊಂದು ಕಪ್ಪು ಹಾವನ್ನು ಬಾಗಿಲಿನ ಮುಂದೆ ತೆವಳುತ್ತಿರುವುದನ್ನು ಗುರುತಿಸುತ್ತಾನೆ ಮತ್ತು ಅವನು ತನ್ನ ಹೆಂಡತಿಯನ್ನು ಎಚ್ಚರಿಸಲು ತಕ್ಷಣವೇ ಅದನ್ನು ತೋರಿಸುತ್ತಾನೆ.
ಅವನು ತನ್ನನ್ನು ತಮಾಷೆ ಮಾಡುತ್ತಿದ್ದಾನೆ ಎಂದು ಭಾವಿಸಿದ ಹೆಂಡತಿ ಕಪ್ಪು ಹಾವನ್ನು ಹಿಡಿಯಲು ಬಾಗಿದ ಕೂಡಲೇ ಆ ಹಾವು ಚಲಿಸಲು ಪ್ರಾರಂಭಿಸಿದಾಗ ಅಕೆ ಭಯಭೀತಳಾಗುತ್ತಾಳೆ ಮತ್ತು ಭಯದಿಂದ ತನ್ನ ಗಂಡನ ಮಡಿಲಲ್ಲಿ ಜಿಗಿದಿದ್ದಾಳೆ. ತಿರುಗಿ ನೋಡಿದರೆ, ಅದು ನಿಜವಾದ ಹಾವಲ್ಲ ಎಂದು ಗೊತ್ತಾಗುತ್ತದೆ.
ಈ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ hepgul5 ಎಂಬ ಖಾತೆಯಲ್ಲಿ 3 ನಗುವ ಎಮೋಜಿಗಳನ್ನು ಹೊಂದಿರುವ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.