ಮನೆಯೊಂದರಲ್ಲಿ 50-60 ಮೇಲ್ಪಟ್ಟ ಅಂಕಲ್ಗಳೆಲ್ಲ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದು, ಈ ವೇಳೆ ನಾಗಿನ್ ಡ್ಯಾನ್ಸ್ ಮಾಡಿದ್ದಾರೆ. ಅವರೆಲ್ಲ ಮೈಚಳಿ ಬಿಟ್ಟು ಖುಷಿಯಿಂದ ಸ್ಟೆಪ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
ಈ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ‘ಜಿಐಇಡಿಡಿಇ’ ಎಂಬ ಹೆಸರಿನ ಪೇಜ್ ಹಂಚಿಕೊಂಡಿದ್ದು ‘ನಾನು ಮತ್ತು ನನ್ನ ಬೋಯಿಸ್(ಬಾಯ್ಸ್) 30 ವರ್ಷಗಳ ನಂತರ’ ಎಂಬ ಶೀರ್ಷಿಕೆ ಇದೆ. ಇದು ಅತೀ ಕಡಿಮೆ ಅವಧಿಯಲ್ಲಿ 40 ಸಾವಿರಕ್ಕಿಂತ ಹೆಚ್ಚು ವೀಕ್ಷಣೆಯಾಗಿದ್ದು, 4 ಸಾವಿರದಷ್ಟು ಲೈಕ್ ಗಿಟ್ಟಿಸಿದೆ.
ಮನಸ್ಸಿನ ಎಲ್ಲ ಸಂಕಟ ಬದಿಗಿಟ್ಟು ಅಂಕಲ್ಗಳು ಸಂತೋಷದಿಂದ ಕುಣಿಯುತ್ತಿರುವುದು ಕಾಣಬಹುದಾಗಿದೆ. ಕೆಲವರು ಬದಿಯಲ್ಲಿ ನಿಂತು ಚಪ್ಪಾಳೆ ತಟ್ಟುತ್ತಾರೆ, ಮತ್ತಿಬ್ಬರು ಕುಳಿತು ವೀಕ್ಷಿಸುತ್ತಿದ್ದಾರೆ.
ಒಬ್ಬ ವ್ಯಕ್ತಿಯು ಪುಂಗಿ ವಾದ್ಯ ನುಡಿಸುವಂತೆ ಸ್ಟೆಪ್ ಹಾಕಿದರೆ ಮತ್ತೊಬ್ಬರು ಹಾವಿನಂತೆ ವರ್ತಿಸುತ್ತಾರೆ. ಇತರ ಸ್ನೇಹಿತರು ಇವರಿಬ್ಬರನ್ನು ನೋಡಿ ಹಾವು ಹೆಡೆ ಎತ್ತಿದಂತೆ ಕೈಯಲ್ಲಿ ತೋರಿಸಿ ಹೆಜ್ಜೆ ಹಾಕುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಅನೇಕರು ಈ ವಿಡಿಯೋವನ್ನು ಶೇರ್ ಮಾಡಿ ನಮ್ಮ ಹಿಂದಿನ ನೆನಪುಗಳನ್ನು ಮಾಡಿಕೊಂಡಿದ್ದಾರೆ. ಮತ್ತೆ ಕೆಲವರು ಹಾಸ್ಯಮಯ ಕಾಮೆಂಟ್ ಮಾಡಿದ್ದಾರೆ.