ಪ್ರೇಮ ಎಂದರೆ ಹಾಗೇನೆ, ಅದಕ್ಕೆ ತನ್ನ ಸುತ್ತಲಿನ ಜಗತ್ತಿನ ಹಂಗಿಲ್ಲ. ಕೇವಲ ಎರಡು ಮನಸ್ಸುಗಳು ಬಹಳ ಗಾಢವಾಗಿ ಪ್ರೀತಿಸುತ್ತವೆ. ಒಬ್ಬ ಹುಡುಗಿಗೆ ಹುಡುಗನೊಬ್ಬ ಬಹಳ ಹತ್ತಿರವಾಗುತ್ತಲೇ ಹೋಗುತ್ತಾನೆ. ಕೊನೆಗೆ ಅವರಿಬ್ಬರೂ ಸದಾಕಾಲ ಒಟ್ಟಾಗಿ ಜೀವಿಸಲು ಅನುಕೂಲವಾಗುವ ವೈವಾಹಿಕ ಬಂಧನದಲ್ಲಿ ಸಿಲುಕುತ್ತಾರೆ.
ಅಂಥದ್ದೇ ವಿವಾಹ ಸಮಾರಂಭವೊಂದರಲ್ಲಿ ತನ್ನ ನೆಚ್ಚಿನ ಹುಡುಗ ಮೆರವಣಿಗೆಯಲ್ಲಿ ಕುಟುಂಬ ಸಮೇತನಾಗಿ ತನ್ನ ಮನೆಗೆ ಬರುವುದನ್ನೇ ಕಾಯುತ್ತಿದ್ದ ವಧುವು, ಆ ಕ್ಷಣ ಎದುರಾದ ಕೂಡಲೇ ಮನಸ್ಸು ಬಿಚ್ಚಿ ಕುಣಿದಿದ್ದಾಳೆ.
ಕಾರಿನ ಬದಲಿಗೆ ಜೆಸಿಬಿಯಲ್ಲಿ ಬಂದ ಮದುಮಕ್ಕಳು
ಬೂದು ಬಣ್ಣ ಲೆಹೆಂಗಾ ತೊಟ್ಟಿರುವ ವಧುವು ತನ್ನ ಕೋಣೆಯ ಬಾಗಿಲ ಬಳಿ ಅವಿತುಕೊಂಡು, ವರನ ಬರುವಿಕೆಯನ್ನೇ ಕಾಯುತ್ತಿರುತ್ತಾಳೆ. ಆಕೆಯ ಭಾವಿ ಪತಿಯು ಕುಟುಂಬ ಸಮೇತನಾಗಿ ವಧುವಿನ ಮನೆಯ ಹಾಲ್‌ಗೆ ಪ್ರವೇಶಿಸಿದ ಕೂಡಲೇ ಗ್ಲಾಸ್ ಡೋರ್ ಮೂಲಕ ಖಾತ್ರಿಪಡಿಸಿಕೊಂಡ ವಧುವು ಒಳ್ಳೆಯ ಸ್ಟೆಪ್‌ಗಳನ್ನು ಹಾಕಿ ಕುಣಿಯುತ್ತಾಳೆ. ಬಾಲಿವುಡ್‌ನ ಖ್ಯಾತ ಹಾಡು, ’ಮೇರಾ ಪಿಯಾ ಘರ್ ಆಯಾ ’ ಬ್ಯಾಕ್‌ಗ್ರೌಂಡ್‌ನಲ್ಲಿ ಮೊಳಗುತ್ತದೆ.
ಆಧಾರ್‌ಗೆ ಮೊಬೈಲ್ ನಂಬರ್ ಜೋಡಣೆ ಮಾಡಬೇಕಾ….? ನಂಬರ್ ಬದಲಾವಣೆ ಮಾಡಬೇಕಾ…..? ಹೀಗೆ ಮಾಡಿ
ಈ ವೈರಲ್ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. 10 ಸಾವಿರಕ್ಕೂ ಹೆಚ್ಚು ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೋಗೆ ಲೈಕ್ ಒತ್ತಿ ಮೆಚ್ಚುಗೆ ಸೂಚಿಸಿದ್ದಾರೆ.
https://www.instagram.com/reel/CT39rRWJ4R6/?utm_source=ig_web_copy_link