alex Certify ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ ‘ಕಾಲಾ ಚಶ್ಮಾ’ ಟ್ರೆಂಡ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ ‘ಕಾಲಾ ಚಶ್ಮಾ’ ಟ್ರೆಂಡ್…!

ಇನ್​ಸ್ಟಾಗ್ರಾಮ್​ ವೈರಲ್ ಟ್ರೆಂಡ್​ಗಳಿಂದ ತುಂಬಿದೆ. ಹಾಗೆಯೇ, ಮನರಂಜನೆಗಾಗಿ ಹೊಸ ನೃತ್ಯ ಸವಾಲುಗಳನ್ನು ನೀಡುತ್ತಿರುತ್ತದೆ. ಕೆಲವು ತಿಂಗಳ ಹಿಂದೆ, ಕ್ವಿಕ್​ ಸ್ಟೈಲ್​ ಹೆಸರಿನ ನಾರ್ವೇಜಿಯನ್​ ಆಲ್​-ಮೆನ್​ ಡ್ಯಾನ್ಸ್​ ಗ್ರೂಪ್​ ಮದುವೆಯೊಂದರಲ್ಲಿ ಕಾಲಾ ಚಶ್ಮಾ ಹಾಡಿಗೆ ಕಿಲ್ಲರ್​ ನೃತ್ಯ ಪ್ರದರ್ಶನ ನೀಡಿದ ವಿಡಿಯೋ ಹುಚ್ಚು ವೈರಲ್​ ಆಗಿತ್ತು. ಅಂದಿನಿಂದ, ಕಾಲಾ ಚಶ್ಮಾ ನೃತ್ಯ ಹವಾ ಮತ್ತಷ್ಟು ಏರಿಕೆಯಾಯಿತು. ಇದೀಗ ಮರುಸೃಷ್ಟಿ ಮಾಡುವ ತಂಡಗಳು ತಮ್ಮ ಸಾಹಸ ಮಾಡುತ್ತಿವೆ.

ಇದೀಗ ಮುಂಬೈ ಲೋಕಲ್​ ರೈಲಿನಲ್ಲಿ ಹುಡುಗರ ಗುಂಪೊಂದು ಈ ಹಾಡಿನ ಡ್ಯಾನ್ಸನ್ನು ಮರುಸೃಷ್ಟಿಸುವ ತಮಾಷೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

ಒಬ್ಬ ವ್ಯಕ್ತಿ ರೈಲಿನಿಂದ ಇಳಿಯಲು ಸಿದ್ಧರಾಗಿರುವಾಗ ಇನ್ನೊಬ್ಬ ಆತನನ್ನು ರೈಲಿನಿಂದ ತಳ್ಳುತ್ತಾನೆ. ವೈರಲ್​ ಟ್ರೆಂಡ್​ನ ಹುಕ್​ ಹೆಜ್ಜೆಯನ್ನು ನಿರ್ವಹಿಸಲು ಆ ರೀತಿ ಕೆಳಗೆ ಬೀಳುತ್ತಾನೆ, ಉಳಿದ ಸ್ನೇಹಿತರು ಆತನ ಬೆನ್ನಿಗೆ ಗುದ್ದುವಂತೆ ನಟಿಸುತ್ತಾರೆ. ಹಾಡಿನ ರಿದಂಗೆ ತಕ್ಕಂತೆ ಅವರ ಸ್ಟೆಪ್​ಗಳು ಗಮನ ಸೆಳೆಯುತ್ತದೆ.

ಸಾಮಾಜಿಕ ಜಾಲತಾಣ ಬಳಕೆದಾರರು ಈ ತಮಾಷೆಯ ಮನರಂಜನೆಯನ್ನು ಇಷ್ಟಪಟ್ಟಿದ್ದಾರೆ, ಪೋಸ್ಟ್​ ಆಗುತ್ತಿದ್ದಂತೆ ವಿಡಿಯೋ ವೈರಲ್​ ಆಗಿ, 1 ಮಿಲಿಯನ್​ ವೀಕ್ಷಣೆ ಕಂಡಿದೆ. 44 ಸಾವಿರಕ್ಕೂ ಹೆಚ್ಚು ಲೈಕ್​ ಬಂದಿದ್ದು, ಸಾವಿರಾರು ಮಂದಿ ಕಾಮೆಂಟ್​ ಮಾಡಿ, ತಮ್ಮ ಖುಷಿ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...