ಇನ್ಸ್ಟಾಗ್ರಾಮ್ ವೈರಲ್ ಟ್ರೆಂಡ್ಗಳಿಂದ ತುಂಬಿದೆ. ಹಾಗೆಯೇ, ಮನರಂಜನೆಗಾಗಿ ಹೊಸ ನೃತ್ಯ ಸವಾಲುಗಳನ್ನು ನೀಡುತ್ತಿರುತ್ತದೆ. ಕೆಲವು ತಿಂಗಳ ಹಿಂದೆ, ಕ್ವಿಕ್ ಸ್ಟೈಲ್ ಹೆಸರಿನ ನಾರ್ವೇಜಿಯನ್ ಆಲ್-ಮೆನ್ ಡ್ಯಾನ್ಸ್ ಗ್ರೂಪ್ ಮದುವೆಯೊಂದರಲ್ಲಿ ಕಾಲಾ ಚಶ್ಮಾ ಹಾಡಿಗೆ ಕಿಲ್ಲರ್ ನೃತ್ಯ ಪ್ರದರ್ಶನ ನೀಡಿದ ವಿಡಿಯೋ ಹುಚ್ಚು ವೈರಲ್ ಆಗಿತ್ತು. ಅಂದಿನಿಂದ, ಕಾಲಾ ಚಶ್ಮಾ ನೃತ್ಯ ಹವಾ ಮತ್ತಷ್ಟು ಏರಿಕೆಯಾಯಿತು. ಇದೀಗ ಮರುಸೃಷ್ಟಿ ಮಾಡುವ ತಂಡಗಳು ತಮ್ಮ ಸಾಹಸ ಮಾಡುತ್ತಿವೆ.
ಇದೀಗ ಮುಂಬೈ ಲೋಕಲ್ ರೈಲಿನಲ್ಲಿ ಹುಡುಗರ ಗುಂಪೊಂದು ಈ ಹಾಡಿನ ಡ್ಯಾನ್ಸನ್ನು ಮರುಸೃಷ್ಟಿಸುವ ತಮಾಷೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
ಒಬ್ಬ ವ್ಯಕ್ತಿ ರೈಲಿನಿಂದ ಇಳಿಯಲು ಸಿದ್ಧರಾಗಿರುವಾಗ ಇನ್ನೊಬ್ಬ ಆತನನ್ನು ರೈಲಿನಿಂದ ತಳ್ಳುತ್ತಾನೆ. ವೈರಲ್ ಟ್ರೆಂಡ್ನ ಹುಕ್ ಹೆಜ್ಜೆಯನ್ನು ನಿರ್ವಹಿಸಲು ಆ ರೀತಿ ಕೆಳಗೆ ಬೀಳುತ್ತಾನೆ, ಉಳಿದ ಸ್ನೇಹಿತರು ಆತನ ಬೆನ್ನಿಗೆ ಗುದ್ದುವಂತೆ ನಟಿಸುತ್ತಾರೆ. ಹಾಡಿನ ರಿದಂಗೆ ತಕ್ಕಂತೆ ಅವರ ಸ್ಟೆಪ್ಗಳು ಗಮನ ಸೆಳೆಯುತ್ತದೆ.
ಸಾಮಾಜಿಕ ಜಾಲತಾಣ ಬಳಕೆದಾರರು ಈ ತಮಾಷೆಯ ಮನರಂಜನೆಯನ್ನು ಇಷ್ಟಪಟ್ಟಿದ್ದಾರೆ, ಪೋಸ್ಟ್ ಆಗುತ್ತಿದ್ದಂತೆ ವಿಡಿಯೋ ವೈರಲ್ ಆಗಿ, 1 ಮಿಲಿಯನ್ ವೀಕ್ಷಣೆ ಕಂಡಿದೆ. 44 ಸಾವಿರಕ್ಕೂ ಹೆಚ್ಚು ಲೈಕ್ ಬಂದಿದ್ದು, ಸಾವಿರಾರು ಮಂದಿ ಕಾಮೆಂಟ್ ಮಾಡಿ, ತಮ್ಮ ಖುಷಿ ದಾಖಲಿಸಿದ್ದಾರೆ.