ಕಲೆಗೆ ಈಗ ಸಾಮಾಜಿಕ ಜಾಲತಾಣವೂ ಒಂದು ವೇದಿಕೆ. ಸೂಕ್ತ ವೇದಿಕೆ ಸಿಗದವರಿಗೆ ಜಾಲತಾಣಗಳು ಸಕ್ಸಸ್ ಕೊಡುತ್ತಿದೆ. ರಾತ್ರೋರಾತ್ರಿ ಅಭಿಮಾನಿಗಳು ಹುಟ್ಟಿಕೊಳ್ಳುವಂತಾಗುತ್ತಿದೆ.
ಇಷ್ಟೇಕೆ ಪೀಠಿಕೆ ಎಂದಿರಾ, ಡ್ಯಾನ್ಸ್ನ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಮೂವರು ಹುಡುಗರು ಸುಂದರವಾದ ನೃತ್ಯ ಪ್ರದರ್ಶಿಸಿದ್ದು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಮೂವರು ಹುಡುಗರು ಬಿಳಿ ಮುಖವಾಡಗಳು, ಟೋಪಿ ಮತ್ತು ಮ್ಯಾಚಿಂಗ್ ಬಟ್ಟೆಗಳನ್ನು ಧರಿಸಿರುವುದನ್ನು ಕಾಣಬಹುದು. ಅವರಲ್ಲಿ ಒಬ್ಬರು ಕುಳಿತಿದ್ದಾರೆ ಮತ್ತು ಇಬ್ಬರು ಹುಡುಗರು ಅವನ ಹಿಂದೆ ಮುಖವನ್ನು ತಗ್ಗಿಸಿ ನಿಂತಿದ್ದಾರೆ. ಮೇಲ್ನೋಟಕ್ಕೆ ಏನಾದರೂ ಮ್ಯಾಜಿಕ್ ಮಾಡಲು ಹೊರಟಿದ್ದಾರೆ ಅನ್ನಿಸಿದರೂ ಕೆಲವೇ ಕ್ಷಣಗಳಲ್ಲಿ ಡ್ಯಾನ್ಸ್ ಮ್ಯಾಜಿಕ್ ಮಾಡಿ ನೋಡುಗರನ್ನು ಅಚ್ಚರಿಗೆ ತಳ್ಳುತ್ತಾರೆ.
ಎಲ್ಲಾ ಹುಡುಗರು ಸಿಂಕ್ ಆಗುವಂತೆ ಫಾಮೇರ್ಶನ್ಗಳನ್ನು ತಮ್ಮ ಕೈ ಮತ್ತು ಮುಖವನ್ನು ಮಾತ್ರ ಬಳಸಿ ಪ್ರಸ್ತುತಪಡಿಸಿದ್ದು, ಆಕರ್ಷಕ ಎನಿಸುತ್ತದೆ. ಡ್ಯಾನ್ಸ್ ಟ್ಯುಟೋರಿಯಲ್ಸ್ ಎಂಬ ಇನ್ಸ್ಟಾಗ್ರಾಮ್ ಪುಟವು ವೀಡಿಯೊವನ್ನು ಹಂಚಿಕೊಂಡು, “ಇದು ಇನ್ಕ್ರೆಡಿಬಲ್” ಎಂದು ಬರೆದಿದೆ. ನೆಟ್ಟಿಗರೂ ಸಹ ಅಚ್ಚರಿ ವ್ಯಕ್ತಪಡಿಸಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.