ಯುವಕರ ಗುಂಪು ನಾಟಿಂಗ್ಹ್ಯಾಮ್ ನಗರ ಕೇಂದ್ರದಲ್ಲಿರುವ ಮೆಕ್ಡೊನಾಲ್ಡ್ ರೆಸ್ಟೋರೆಂಟ್ಗೆ ನುಗ್ಗಿ ತಿಂಡಿ ತಿನಿಸು ಮತ್ತು ತಂಪು ಪಾನೀಯಗಳನ್ನು ದೋಚಿರುವ ಪ್ರಸಂಗ ನಡೆದಿದೆ.
ಪೊಲೀಸರ ಪ್ರಕಾರ, ಸುಮಾರು 50 ಹದಿಹರೆಯದವರ ಗುಂಪು ಆಗಸ್ಟ್ 21ರಂದು ರಾತ್ರಿ 9 ಗಂಟೆಗೆ ಕ್ಲಂಬರ್ ಸ್ಟ್ರೀಟ್ ಫಾಸ್ಟ್ ಫುಡ್ ಚೈನ್ನಲ್ಲಿ ಸೇರಿತು. ಅಲ್ಲಿದ್ದವರ ವಯಸ್ಸು 14 ರಿಂದ 16ರ ನಡುವೆ ಇತ್ತೆಂದು ಹೇಳಲಾಗಿದೆ.
ವೀಡಿಯೊದಲ್ಲಿ, ಅವರಲ್ಲಿ ಕೆಲವರು ಕೌಂಟರ್ ಮೇಲೆ ಹಾರಿ ಅಡುಗೆ ಮನೆಯಲ್ಲಿ ತಯಾರಿಸುತ್ತಿದ್ದ ಆಹಾರವನ್ನು ಕದಿಯಲು ಪ್ರಾರಂಭಿಸಿದರು. ಕೆಲವರು ಸಿಬ್ಬಂದಿಯನ್ನು ನಿಂದಿಸಿ ಬೆದರಿಕೆ ಹಾಕಿದ್ದಾರೆ. ಈ ಘಟನೆಯನ್ನು ಇತರರು ತಮ್ಮ ಫೋನ್ಗಳಲ್ಲಿ ಚಿತ್ರೀಕರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಆಗಿದ್ದು, ಪೊಲೀಸರು ಸಿಸಿ ಟಿವಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಈ ಘಟನೆಯನ್ನು ಕಮರ್ಷಿಯಲ್ ಕಳ್ಳತನ ಎಂದು ಪರಿಗಣಿಸಲಾಗುತ್ತಿದೆ ಎಂದು ಪೊಲೀಸ್ ವಕ್ತಾರರು ತಿಳಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಗುಂಪು ಆಗಲೇ ಪರಾರಿಯಾಗಿತ್ತು. ಇನ್ನೂ ಯಾರನ್ನೂ ಬಂಧಿಸಿಲ್ಲ. ಆದರೆ ನಾವು ಕ್ಲಂಬರ್ ಸ್ಟ್ರೀಟ್ ಮೆಕ್ಡೊನಾಲ್ಡ್ ನೊಂದಿಗೆ ಕೆಲಸ ಮಾಡುತ್ತೇವೆ, ಕದ್ದವರನ್ನು ಕಂಡುಹಿಡಿಯಲು ಸಿಸಿ ಟಿವಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ನಾವು ಈ ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದು, ಇದು ಕಮರ್ಷಿಯಲ್ ಲೂಟಿ. ಏಕೆಂದರೆ ಆ ಗುಂಪು ವ್ಯಾಪಾರದ ಕೌಂಟರ್ನ ಹಿಂದೆ ಬಂದು ಬಲವಂತವಾಗಿ ಆಹಾರ ಮತ್ತು ತಂಪು ಪಾನೀಯಗಳನ್ನು ಕದ್ದಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಮೆಕ್ಡೊನಾಲ್ಡ್ಸ್ನ ವಕ್ತಾರರೂ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಭಾನುವಾರ ರಾತ್ರಿ ನಮ್ಮ ಕ್ಲಂಬರ್ ಸ್ಟ್ರೀಟ್ ರೆಸ್ಟೋರೆಂಟ್ನಲ್ಲಿ ನಡೆದ ಘಟನೆಯಿಂದ ನಾವು ಆಘಾತ ಮತ್ತು ಗಾಬರಿಗೊಂಡಿದ್ದೇವೆ. ಮುಂದಿನ ತನಿಖೆಗೆ ನಾವು ಪೊಲೀಸರಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.