alex Certify ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ ಮಹಿಳೆಯರ ಈ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ ಮಹಿಳೆಯರ ಈ ವಿಡಿಯೋ..!

Viral Video: Beautifully Decked Up Women Sit Inside A Car & Then This Funny Thing Happens | Watchಇಂಟರ್ನೆಟ್​​ನಲ್ಲಿ ಫನ್ನಿ ವಿಡಿಯೋಗಳಿಗೇನು ಬರಗಾಲವಿಲ್ಲ. ಇಲ್ಲಿ ಸಾಗುವ ಸಾಕಷ್ಟು ವಿಡಿಯೋಗಳು ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ. ಇದೇ ಸಾಲಿಗೆ ಸೇರಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಇದೀಗ ಧೂಳೆಬ್ಬಿಸುತ್ತಿದೆ.

ಈ ವಿಡಿಯೋದಲ್ಲಿ ಸೀರೆಯನ್ನು ಧರಿಸಿದ್ದ ಕೆಲವು ಮಹಿಳೆಯರು ಕಾರಿನಲ್ಲಿ ಕುಳಿತು ಸಮಾರಂಭವೊಂದಕ್ಕೆ ತೆರಳಲು ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ಕಾರಿನಲ್ಲಿ ಕುಳಿತ ಮಹಿಳೆಯರು ಎಲ್ಲರ ಕಡೆಗೆ ಕೈ ಬೀಸಿದ್ದಾರೆ. ಒಬ್ಬರಾದ ಮೇಲೆ ಒಬ್ಬರಂತೆ ಕಾರಿನಲ್ಲಿ ಕುಳಿತುಕೊಳ್ಳುತ್ತಾರೆ.

ಇದಾಗಿ ಕೆಲವೇ ನಿಮಿಷಗಳಲ್ಲಿ ನೀವು ನಂಬಲೇ ಅಸಾಧ್ಯವಾದಂತಹ ದೃಶ್ಯವೊಂದು ಕಣ್ಮುಂದೆ ಕಾಣುತ್ತದೆ. ಮಹಿಳೆಯರು ಕುಳಿತಿದ್ದ ಕಾರು ಅಸಲಿಗೆ ಕಾರೇ ಅಲ್ಲ. ಬದಲಾಗಿ ಅದೊಂದು ಎತ್ತಿನ ಬಂಡಿ. ಎತ್ತಿನ ಬಂಡಿಯನ್ನು ಕಾರಿನ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...