
ಇಂಥದ್ದೊಂದು ಅಪರೂಪದ ಪ್ರಸಂಗ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಅದರ ವಿಡಿಯೊವನ್ನು ಡಾ. ಅಜಯಿತಾ ಎನ್ನುವವರು ಟ್ವಿಟರ್ ಖಾತೆದಾರರು ಹಂಚಿಕೊಂಡಿದ್ದಾರೆ.
ನೀಲಿ ಬಣ್ಣದ ಕುರ್ತಾ , ಕಪ್ಪು ಪೈಜಾಮ ಧರಿಸಿಕೊಂಡು ಹೆಗಲಿಗೆ ಬ್ಯಾಗ್ ನೇತಾಕಿಕೊಂಡು, ಎರಡು ಜಡೆಯ ಬಾಲಕಿಯೊಬ್ಬಳು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾಳೆ.
ಅವಳ ಹಿಂದೆಯೇ ತಾನು ಕೂಡ ಶಾಲೆಗೆ ಹೋಗುವ ಧಾವಂತದಲ್ಲಿ ಬಿಳಿ ಮೇಕೆಯೊಂದು ಜಿಗಿಯುತ್ತಾ ಸಾಗುತ್ತಿದೆ.
ಬಾಲಕಿ ವೇಗವಾಗಿ ಓಡಿದರೂ, ಅವಳಷ್ಟೇ ಜೋರಾಗಿ ಜಿಗಿಯುತ್ತಲೇ ಮೇಕೆ ಹಿಂಬಾಲಿಸುತ್ತದೆ.
ಗಲ್ಲಿಗಲ್ಲಿಗಳು, ತಿರುವುಗಳಲ್ಲೂ ಕೂಡ ಮೇಕೆ ಬೇರೆ ಕಡೆಗೆ ಸಾಗುವುದಿಲ್ಲ. ಶಾಲೆಯ ಬಗ್ಗೆ ಬಾಲಕಿಯಷ್ಟೇ ಶ್ರದ್ಧೆ ಕೂಡ ಮೇಕೆಗೆ ಇದೆ ಇರಬೇಕು ಎಂದು ನೆಟ್ಟಿಗರು ವಿಡಿಯೊ ನೋಡಿ ಹಾಸ್ಯ ಮಾಡಿದ್ದಾರೆ.
8 ಕಾಲು, 2 ಸೊಂಟವಿರುವ ವಿಚಿತ್ರ ಮೇಕೆ ಜನನ…!
ವಿಡಿಯೊಗೆ ಮಾತ್ರ ‘ Dr. Ajayita (@DoctorAjayita) ‘ ಅವರುʼಇಬ್ಬರು ಸ್ನೇಹಿತರ ಶಾಲೆಯ ಕಡೆಗಿನ ಪಯಣ’ ಎಂದು ಚೆಂದವಾದ ಸಾಲು ಬರೆದಿದ್ದಾರೆ.