alex Certify ತಮಾಷೆ ಮಾಡಲು ಹೋಗಿ ನಡು ಬೀದಿಯಲ್ಲಿ ರಂಪಾಟಕ್ಕೆ ಕಾರಣವಾದ ಯುವತಿ….! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಾಷೆ ಮಾಡಲು ಹೋಗಿ ನಡು ಬೀದಿಯಲ್ಲಿ ರಂಪಾಟಕ್ಕೆ ಕಾರಣವಾದ ಯುವತಿ….! ವೈರಲ್​ ಆಯ್ತು ವಿಡಿಯೋ

ನಡು ರಸ್ತೆಯಲ್ಲಿ ಯುವತಿ ಯುವಕನ ಕೆನ್ನೆಗೆ ಬಾರಿಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ದೆಹಲಿಯಲ್ಲಿ ಈ ಘಟನೆ ಸಂಭವಿಸಿದ್ದು ತಮಾಷೆ ವಿಡಿಯೋ ಚಿತ್ರೀಕರಿಸುವ ಸಲುವಾಗಿ ಯುವತಿಯು ಅಪರಿಚಿತ ಯುವಕನ ಮೇಲೆ ತಂಪು ಪಾನೀಯವನ್ನು ಚೆಲ್ಲಿದ್ದಳು. ಇದನ್ನು ಯುವಕ ವಿರೋಧಿಸುತ್ತಿದ್ದಂತೆಯೇ ಇಬ್ಬರ ನಡುವೆ ಜಗಳ ಏರ್ಪಟ್ಟಿದೆ. ಜಗಳ ತಾರಕಕ್ಕೇರುತ್ತಿದ್ದಂತೆಯೇ ಯುವತಿ ಯುವಕನ ಕೆನ್ನೆಗೆ ಬಾರಿಸಿದ್ದಾಳೆ.

ಬಳಿಕ ಜಗಳ ಇನ್ನಷ್ಟು ಕಾವು ಪಡೆದಿದ್ದು ಯುವತಿಯು ಮತ್ತೊಂದು ಬಾರಿ ಯುವಕನ ಕೆನ್ನೆಗೆ ಏಟು ನೀಡಿದ್ದಾಳೆ. ಇದರಿಂದ ಕ್ರೋಧಗೊಂಡ ಯುವಕ ಕೂಡ ಯುವತಿಯ ಕೆನ್ನೆಗೆ ಬಾರಿಸಿದ್ದಾನೆ. ಕೂಡಲೇ ಅಲ್ಲಿ ಜನರು ಜಮಾಯಿಸಿದ್ದಾರೆ. ಅನೇಕರು ಇವರಿಬ್ಬರ ನಡುವೆ ನಡೆಯುತ್ತಿದ್ದ ಜಗಳವನ್ನು ನಿಲ್ಲಿಸಲು ಯತ್ನಿಸಿದ್ದಾರೆ.

ನೀನು ಹುಡುಗಿ ಎಂಬ ಒಂದೇ ಕಾರಣಕ್ಕೆ ನೀನು ಏನು ಬೇಕಿದ್ದರೂ ಮಾಡಬಹುದೇ..? ಹುಡುಗರಿಗೆ ಗೌರವ ಅನ್ನೋದು ಇರೋದಿಲ್ವೇ ಎಂದು ಯುವಕ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಪ್ರತ್ಯುತ್ತರ ನೀಡಿದ ಯುವತಿ ನೀನು ಹುಡುಗಿಯ ಕೆನ್ನೆಗೆ ಬಾರಿಸುತ್ತೀಯಾ..? ಎಂದು ಕೇಳಿದ್ದಾಳೆ. ಇದಕ್ಕೆ ಯುವಕ ನೀನು ನನಗೆ ಮೂರು ಬಾರಿ ಹೊಡೆದಿದ್ದೀಯಾ. ನಾನೊಬ್ಬ ಶಿಕ್ಷಕ ಎಂದು ಹೇಳಿದ್ದಾನೆ. ಕೊನೆಯಲ್ಲಿ ಯುವಕ ಲಕ್ನೋದಲ್ಲಿ ನಡೆದ ಘಟನೆ ಬಗ್ಗೆ ಈಕೆಗೆ ಯಾರಾದರೂ ವಿವರಿಸಿ ಎಂದು ಹೇಳಿದ್ದಾನೆ. ಇದಾದ ಬಳಿಕ ಯುವತಿ ಕ್ಷಮೆ ಯಾಚಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...