alex Certify ಬೈಕ್​ ಓಡಿಸುತ್ತಾ ಯುವತಿಯ ನೃತ್ಯ: ವೈರಲ್​ ವಿಡಿಯೋ ನೋಡಿ ಜನರು ಶಾಕ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್​ ಓಡಿಸುತ್ತಾ ಯುವತಿಯ ನೃತ್ಯ: ವೈರಲ್​ ವಿಡಿಯೋ ನೋಡಿ ಜನರು ಶಾಕ್​…..!

ಯುವತಿಯೊಬ್ಬಳು ಬೈಕ್ ಓಡಿಸುತ್ತಿರುವಾಗ ಜನಪ್ರಿಯ ಭೋಜ್‌ಪುರಿ ಹಾಡು ‘ಪಾಟ್ಲಿ ಕಮಾರಿಯಾ ಮೋರಿ’ ನೃತ್ಯ ಮಾಡುವ ವಿಡಿಯೋ ಇದಾಗಿದ್ದು, ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ.

ವೈರಲ್​ ವಿಡಿಯೋದಲ್ಲಿ ಯುವತಿಯೊಬ್ಬಳು ಬೈಕ್ ಓಡಿಸುತ್ತಾ ಭೋಜ್‌ಪುರಿ ಹಾಡಿಗೆ ಚೈತನ್ಯದಾಯಕವಾಗಿ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಈಕೆ ಅದ್ಭುತ ಎನಿಸುವಂಥ ನೃತ್ಯ ಮಾಡಿದ್ದರೂ, ಬೈಕ್​ ಮೇಲಿನ ಈ ಸ್ಟಂಟ್​ ಈಕೆಯ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇತ್ತು.

ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ. ಈಕೆಯ ನೃತ್ಯಕ್ಕೆ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸಿದರೂ, ಹೀಗೆ ನೃತ್ಯ ಮಾಡಿ ವೈರಲ್​ ಆದರೆ ಇದು ಹಲವರಿಗೆ ಪ್ರೇರಣೆ ಆಗುತ್ತದೆ. ತಾವೂ ಹೀಗೆ ಮಾಡಲು ಹೋಗಿ ಜೀವ ಕಳೆದುಕೊಳ್ಳಬಹುದು, ಇಲ್ಲವೇ ಶಾಶ್ವತವಾಗಿ ಅಂಗವಿಕಲರಾಗುವ ಅಪಾಯವಿದೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...