ಯುವತಿಯೊಬ್ಬಳು ಬೈಕ್ ಓಡಿಸುತ್ತಿರುವಾಗ ಜನಪ್ರಿಯ ಭೋಜ್ಪುರಿ ಹಾಡು ‘ಪಾಟ್ಲಿ ಕಮಾರಿಯಾ ಮೋರಿ’ ನೃತ್ಯ ಮಾಡುವ ವಿಡಿಯೋ ಇದಾಗಿದ್ದು, ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ.
ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳು ಬೈಕ್ ಓಡಿಸುತ್ತಾ ಭೋಜ್ಪುರಿ ಹಾಡಿಗೆ ಚೈತನ್ಯದಾಯಕವಾಗಿ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಈಕೆ ಅದ್ಭುತ ಎನಿಸುವಂಥ ನೃತ್ಯ ಮಾಡಿದ್ದರೂ, ಬೈಕ್ ಮೇಲಿನ ಈ ಸ್ಟಂಟ್ ಈಕೆಯ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇತ್ತು.
ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ. ಈಕೆಯ ನೃತ್ಯಕ್ಕೆ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸಿದರೂ, ಹೀಗೆ ನೃತ್ಯ ಮಾಡಿ ವೈರಲ್ ಆದರೆ ಇದು ಹಲವರಿಗೆ ಪ್ರೇರಣೆ ಆಗುತ್ತದೆ. ತಾವೂ ಹೀಗೆ ಮಾಡಲು ಹೋಗಿ ಜೀವ ಕಳೆದುಕೊಳ್ಳಬಹುದು, ಇಲ್ಲವೇ ಶಾಶ್ವತವಾಗಿ ಅಂಗವಿಕಲರಾಗುವ ಅಪಾಯವಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.